ನೈಜೀರಿಯಾ ಹಿಂಸೆಯಿಂದ ತತ್ತರಿಸಿದೆ. ಐಎಸ್ಐಎಸ್ ಮಾತ್ರವಲ್ಲ ಬೋಕೋ ಹರಾಮ್ ಸೇರಿದಂತೆ ಇತರ ಸಂಘಟನೆಗಳು ಸಹ ಹಿಂಸಾಚಾರದಲ್ಲಿ ನಿರತವಾಗಿವೆ. ಜಮೀನು, ಜಾತಿಯ ಸಂಘರ್ಷದಿಂದಲೂ ಇಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದಕ ಜಾಲಗಳು ನಡೆಸುತ್ತಿರುವ ಹಿಂಸಾಚಾರ ತೀವ್ರ ಪ್ರಮಾಣದ್ದಾಗಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೋಕೋ ಹರಾಮ್ನಂಥ ಮೂಲಭೂತವಾದಿ ಸಂಘಟನೆಗಳು ಹಲವು ವರ್ಷಗಳಿಂದ ಹಿಂಸಾಚಾರದಲ್ಲಿ ತೊಡಗಿವೆ. "ಧಾರ್ಮಿಕ ಸ್ವಾತಂತ್ರ್ಯಯ ಉಲ್ಲಂಘಿಸಿದ ದೇಶ'ಗಳ ಪಟ್ಟಿಯಲ್ಲಿ ನೈಜೀರಿಯಾದ ಹೆಸರನ್ನು 2020ರಲ್ಲಿ ಸೇರಿಸಿದ್ದ ಅಮೆರಿಕ, 2023ರಲ್ಲಿ ತೆಗೆದುಹಾಕಿತ್ತು. ಈ ಕ್ರಮವನ್ನು ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆ ನಿಟ್ಟಿನಲ್ಲಿ ಪೂರಕ ಎಂದು ವಿಶ್ಲೇಷಿಸಲಾಯಿತು. ಆದರೆ, ಕಳೆದೊಂದು ವರ್ಷದಲ್ಲಿ ಕೆಸ್ತರನ್ನು ಗುರಿಯಾಗಿಸಿ ದಾಳಿಗಳು ಹೆಚ್ಚುತ್ತಿರುವುದರಿಂದ ಕೆಂಡಾಮಂಡಲವಾಗಿರುವ ಟ್ರಂಪ್ ನೈಜೀರಿಯಾಕ್ಕೆ ಹಲವು ಬಾರಿ ಎಚ್ಚರಿಕೆ ನೀಡಿ, ಈ ಬಾರಿ ದಾಳಿಗೆ ಆದೇಶಿಸಿದ್ದಾರೆ.