ಈ ದಾಳಿಯು ಜಾಗತಿಕ ತೈಲ ಪೂರೈಕೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಅಮೆರಿಕ ಕೈಗೊಂಡ ಅತಿದೊಡ್ಡ ಮಿಲಿಟರಿ ಕ್ರಮ ಎಂದು ವಿಶ್ಲೇಷಿಸಲಾಗುತ್ತಿದೆ. ಇರಾನ್ ಪ್ರಕಟಿಸಿದ್ದ 'ಷರತ್ತುಬದ್ಧ ಮುಕ್ತ ಸಂಚಾರ'ದ ಬೆನ್ನಲ್ಲೇ, ಗುಪ್ತವಾಗಿ ಜಲಮಾರ್ಗದಲ್ಲಿ ಸ್ಫೋಟಕಗಳನ್ನು ಅಳವಡಿಸಲು ಇರಾನ್ ಸಂಚು ರೂಪಿಸಿತ್ತು. ಇದನ್ನು ಪತ್ತೆಹಚ್ಚಿದ ಅಮೆರಿಕದ ಅತ್ಯಾಧುನಿಕ ಯುದ್ಧ ನೌಕೆಗಳು ಮತ್ತು ಡ್ರೋನ್‌ಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿವೆ ಎಂದು ವರದಿ ಉಲ್ಲೇಖಿಸಿದೆ