ಟೆಹ್ರಾನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿರುವ ಬೆನ್ನಲ್ಲೇ, ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ(Ali Khamenei) ಅಮೆರಿಕಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ತನ್ನ ಅತ್ಯಾಧುನಿಕ ಯುದ್ಧನೌಕೆಗಳನ್ನು ಇರಾನ್ ಗಡಿಯತ್ತ ಕಳುಹಿಸಿ ಬೆದರಿಸುತ್ತಿದೆ. ಅದರೆ, ಆ ನೌಕೆಗಳನ್ನು ನಾಶಪಡಿಸುವ ಶಕ್ತಿ ಇರಾನ್ ಬಳಿ ಇದೆ ಎಂದು ಗುಡುಗಿದ್ದಾರೆ.