ಭಾರತೀಯ ಸೇನೆಯ ಕೋಲ್ಡ್ ಸ್ಟಾರ್ಟ್ ಡಾಕ್ಟ್ರಿನ್ ಮಾದರಿಯಲ್ಲೇ ಈ ಕಾರ್ಯಾಚರಣೆ ನಡೆಯಲಿದೆ. ಅಂದರೆ, ಶತ್ರು ರಾಷ್ಟ್ರಕ್ಕೆ ಚೇತರಿಸಿಕೊಳ್ಳಲು ಸಮಯ ನೀಡದೆ, ಮಿಂಚಿನ ವೇಗದಲ್ಲಿ ಅತಿಕ್ರಮಿಸಿ, ಗುರಿಯನ್ನು ಸಾಧಿಸಿ ವಾಪಸ್ ಬರುವುದು. ಇರಾನ್‌ನ ಭೂಪ್ರದೇಶದೊಳಗೆ ನುಗ್ಗಿ, ವಿಕಿರಣಶೀಲ ವಸ್ತುಗಳನ್ನು ಸುರಕ್ಷಿತವಾಗಿ ಹೊರತೆಗೆಯುವುದು ಈ ಕಮಾಂಡೋಗಳ ಮುಂದಿರುವ ಸವಾಲಾಗಿದೆ.