ಅಮೆರಿಕದ ಬಿಗ್ ಆಪರೇಷನ್: ವೆನೆಜುವೆಲಾ ಅಧ್ಯಕ್ಷ ಮಡುರೊ ಮತ್ತು ಪತ್ನಿ ಸೇನೆಯ ವಶಕ್ಕೆ! ಡೊನಾಲ್ಡ್ ಟ್ರಂಪ್ ಘೋಷಣೆ..Donald Trump

Donald Trump
Donald Trump
Published on
ಅಮೆರಿಕ: ಕ್ಯಾರಕಾಸ್ ಮೇಲೆ ನಡೆದ ವೈಮಾನಿಕ ದಾಳಿಯ ನಂತರ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕದ ಪಡೆಗಳು ಸೆರೆಹಿಡಿದಿವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಧ್ಯಕ್ಷ ಟ್ರಂಪ್, ಅಮೆರಿಕವು ವೆನೆಜುವೆಲಾ ಮತ್ತು ಅದರ ನಾಯಕನ ವಿರುದ್ಧ ದೊಡ್ಡ ಪ್ರಮಾಣದ ದಾಳಿಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಹೇಳಿದ್ದಾರೆ. ಅಮೆರಿಕದ ಮಿಲಿಟರಿ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ವಶಕ್ಕೆ ತೆಗೆದುಕೊಂಡು ದೇಶದಿಂದ ಹೊರಗೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ.
ಶನಿವಾರ (ಜ.3) ಸುಮಾರು 2 ಗಂಟೆಯಿಂದ ಕ್ಯಾರಕಾಸ್‌ನಾದ್ಯಂತ ಹಲವಾರು ದೊಡ್ಡ ಸ್ಫೋಟದ ಶಬ್ದಗಳು ವರದಿಯಾದ ನಂತರ ಈ ಹೇಳಿಕೆ ಬಂದಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುವ ವೀಡಿಯೊಗಳು ಕಟ್ಟಡಗಳನ್ನು ಆವರಿಸುತ್ತಿರುವ ಬೆಂಕಿ ಮತ್ತು ನಗರದ ಕೆಲವು ಭಾಗಗಳಲ್ಲಿ ದಟ್ಟವಾದ ಹೊಗೆ ತುಂಬುತ್ತಿರುವುದನ್ನು ಕಾಣಬಹುದು.
ಈ ವೈಮಾನಿಕ ದಾಳಿಯಿಂದ ವೆನೆಜುವೆಲಾದ ರಾಜಧಾನಿಯ ದಕ್ಷಿಣ ಭಾಗದಲ್ಲಿರುವ ಪ್ರಮುಖ ಮಿಲಿಟರಿ ನೆಲೆಯ ಸಮೀಪವಿರುವ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡ ವರದಿಯಾಗಿದೆ. ನಿವಾಸಿಗಳ ಪ್ರಕಾರ ಕನಿಷ್ಠ ಏಳರಿಂದ ಎಂಟು ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಹೇಳಲಾಗುತ್ತಿದೆ.
ವೆನೆಜುವೆಲಾದ ಸರ್ಕಾರವು ದಾಳಿಗಳನ್ನು ಅಮೆರಿಕದ ಪಡೆಗಳು ನಡೆಸಿವೆ ಎಂದು ಹೇಳಿದೆ. ಮಡುರೊ ಮತ್ತು ಅವರ ಪತ್ನಿಯನ್ನು ಸೆರೆಹಿಡಿದ ಬಗ್ಗೆ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗೆ ವೆನೆಜುವೆಲಾದ ಸರ್ಕಾರ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net