ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಮತ್ತೆ ಅಮೆರಿಕ-ಇರಾನ್ ನಡುವಿನ ಸಂಘರ್ಷ(US-Iran conflict) ಮುಂದುವರೆದಿದ್ದು, ಇರಾನ್‌ನ ಹಾರ್ಮುಜ್ ಜಲಸಂಧಿಯಲ್ಲಿರುವ ಕೆಶ್ಮ್ ದ್ವೀಪದ ಮೇಲೆ ಸ್ವರಕ್ಷಣಾ ದಾಳಿಗಳನ್ನು ನಡೆಸಿರುವುದಾಗಿ ಬುಧವಾರ(ಜೂ. 03) ಮುಂಜಾನೆ ಯುಎಸ್ ಸೇನೆ ಘೋಷಿಸಿದೆ. ಪ್ರತಿಯಾಗಿ ಗಲ್ಫ್ ರಾಷ್ಟ್ರಗಳ ಯುಎಸ್ ಸೇನಾ ನೆಲೆಗಳನ್ನುಗುರಿಯಾಗಿಸಿ ಇರಾನ್ ಪ್ರತಿದಾಳಿ ನಡೆಸಿದೆ ಎಂದು ವರದಿಯಾಗಿದೆ.