ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಟ್ರಂಪ್ ಆಡಳಿತವು, ಆಸ್ಟ್ರೇಲಿಯಾ, ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳನ್ನು ಒಳಗೊಂಡಿರುವ ಕ್ವಾಡ್ ಗುಂಪಿನೊಳಗೆ ನಿರಂತರ ಸಹಕಾರದ ಮೂಲಕ ಭಾರತವು ಇಂಡೋ-ಪೆಸಿಫಿಕ್ ಭದ್ರತೆಗೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸಲಿದೆ. ಅಲ್ಲದೆ, ವಾಷಿಂಗ್ಟನ್ ನವದೆಹಲಿಯೊಂದಿಗಿನ ವಾಣಿಜ್ಯ ಮತ್ತು ಇತರ ಸಂಬಂಧಗಳನ್ನು ಸುಧಾರಿಸುವುದನ್ನು ಮುಂದುವರಿಸಬೇಕು ಎಂದು ತಿಳಿಸಿದೆ.