ಯುಎಸ್ ನ್ಯಾಯಾಂಗ ಇಲಾಖೆ ಶುಕ್ರವಾರ (ಜ.30) ದಿವಂಗತ ಹಣಕಾಸುದಾರ ಮತ್ತು ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ಗೆ ಸಂಬಂಧಿಸಿದ ತನಿಖಾ ಸಾಮಗ್ರಿಗಳ ದೊಡ್ಡ ಬ್ಯಾಚ್ನ್ನು ಬಿಡುಗಡೆ ಮಾಡಿತು. ಬಿಡುಗಡೆಯಾದ ತನಿಖಾ ಸಾಮಗ್ರಿಗಳಲ್ಲಿ 30 ಲಕ್ಷಕ್ಕೂ ಹೆಚ್ಚಿನ ಪುಟಗಳ ದಾಖಲೆ, 2,000 ಕ್ಕೂ ಹೆಚ್ಚು ವೀಡಿಯೊಗಳು ಮತ್ತು ಸುಮಾರು 1,80,000 ಚಿತ್ರಗಳನ್ನು ಒಳಗೊಂಡಿದೆ.