US-Iran ceasefire: ಶಾಂತಿ ಒಪ್ಪಂದ ಬಳಿಕವೂ 'ಅಣ್ವಸ್ತ್ರ ತಯಾರಿಸಿದ್ರೆ ಇರಾನ್​ಗೆ ನರಕ ತೋರಿಸ್ತೇವೆ':​ ಟ್ರಂಪ್ ವಾರ್ನಿಂಗ್!

Donald Trump Iran Warning
Donald Trump Iran Warning
Published on

ಪ್ರಮುಖ ಮುಖ್ಯಾಂಶಗಳು

  • ಅಣ್ವಸ್ತ್ರ ತಯಾರಿಸುವುದನ್ನು ಮುಂದುವರೆಸಿದರೆ ಸರ್ವ ನಾಶ ಮಾಡ್ತೇವೆ
  • ಶಾಂತಿ ಒಪ್ಪಂದದ ಮಾತುಕತೆ ಬೆನ್ನಲ್ಲೇ ಇರಾನ್​ಗೆ ವಾರ್ನಿಂಗ್​ ಕೊಟ್ಟ ಡೊನಾಲ್ಡ್​ ಟ್ರಂಪ್
  • ನಾನಿಲ್ಲದಿದ್ದರೆ ಇಸ್ರೇಲ್​ ಇರುತ್ತಿರಲಿಲ್ಲ ಎಂದ ಡೊನಾಲ್ಡ್ ಟ್ರಂಪ್
Donald Trump Iran Warning: ಇರಾನ್​ ವಿರುದ್ಧ 107 ದಿನಗಳ ಭೀಕರ ಯುದ್ಧವನ್ನು ಕೊನೆಗೊಳಿಸುವ ಪ್ರಾಥಮಿಕ ಶಾಂತಿ ಒಪ್ಪಂದದ ಅಂಶಗಳನ್ನು ಅಂತಿಮಗೊಳಿಸಲಾಗಿದೆ. ಪಾಕಿಸ್ತಾನ ಮತ್ತು ಕತಾರ್​ ಮಧ್ಯಸ್ಥಿಕೆಯಲ್ಲಿ ನಡೆದ ಈ ಮಧ್ಯಂತರ ಶಾಂತಿ ಒಪ್ಪಂದಕ್ಕೆ ಜೂನ್​ 19ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಅಧಿಕೃತವಾಗಿ ಸಹಿ ಬೀಳಲಿದೆ. ಈ ಮಧ್ಯೆ ಟ್ರಂಪ್​​ ಬಹಿರಂಗವಾಗಿ ಇರಾನ್​ಗೆ ವಾರ್ನಿಂಗ್​ವೊಂದನ್ನು ಕೊಟ್ಟಿದ್ದಾರೆ.

ನರಕ ತೋರಿಸ್ತೇವೆ

ಮಧ್ಯಂತರ ಶಾಂತಿ ಒಪ್ಪಂದದ ನಂತರವೂ ಇರಾನ್​​ ಅಣ್ವಸ್ತ್ರ ತಯಾರಿಸಲು ಪ್ರಯತ್ನಿಸಿದರೆ ಇಡೀ ಪ್ರದೇಶವನ್ನೇ ನರಕ ಮಾಡಿಬಿಡುತ್ತೇವೆ. ಸರ್ವನಾಶ ಮಾಡುತ್ತೇವೆ ಎಚ್ಚರದಿಂದಿರಿ ಎನ್ನುವ ಎಚ್ಚರಿಕೆಯ ಸಂದೇಶವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ಕೊಟ್ಟಿದ್ದಾರೆ.
ಅಮೆರಿಕ ಮತ್ತು ಇರಾನ್ ಮಧ್ಯೆಯ ಐತಿಹಾಸಿಕ ಕದನ ವಿರಾಮವನ್ನು ಅರವತ್ತು ದಿನದವರೆಗೂ ವಿಸ್ತರಿಸುವ ಶಾಂತಿ ಒಪ್ಪಂದಕ್ಕೆ ಬಂದಿದ್ದು. ಇರಾನ್ ಬಂದರುಗಳ ಮೇಲಿನ ಅಮೆರಿಕದ ನೌಕಾ ದಿಗ್ಬಂಧನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಕೊಟ್ಟಿದ್ದಾರೆ. ಒಪ್ಪಂದಕ್ಕೆ ಅಧಿಕೃತ ಸಹಿ ಹಾಕುವ ಸಮಾರಂಭವು ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿದೆ ಎನ್ನಲಾಗಿದೆ.

ಟ್ರಂಪ್​ ಹೇಳಿದ್ದೇನು?‘

'ಇರಾನ್​ ಅಣ್ವಸ್ತ್ರ ಹೊಂದುವುದನ್ನು ತಡೆಯಲು ಇರುವ ಪ್ರಮುಖ ಅಸ್ತ್ರ ಇದಾಗಿದೆ. ಶಾಂತಿ ಒಪ್ಪಂದದ ಮಾತುಕತೆಯ ನಂತರವೂ ​ ಇರಾನ್​ ತನ್ನ ನಿಯಮ ಉಲ್ಲಂಘೀಸಿ ಅಣ್ವಸ್ತ್ರ ತಯಾರಿಕೆಯನ್ನು ಮತ್ತೆ ಶುರುವಿಟ್ಟುಕೊಂಡರೆ ನರಕ ದರ್ಶನ ಮಾಡಿಸುತ್ತೇವೆ. ಎಲ್ಲ ಪ್ರದೇಶಗಳನ್ನು ಸರ್ವನಾಶ ಮಾಡಿಬಿಡುತ್ತೇವೆ' ಎಂದು ಟ್ರಂಪ್​ ವಾರ್ನಿಂಗ್​ ಕೊಟ್ಟಿದ್ದಾರೆ.

ನಾನಿಲ್ಲ ಅಂದ್ರೆ ಇಸ್ರೇಲ್ ಇಲ್ಲ

ಇರಾನ್​ ಜೊತೆಗಿನ ಶಾಂತಿ ಒಪ್ಪಂದ ಕೊನೆಗೊಳಿಸುವ ಕೆಲವು ಗಂಟೆಗಳ ಹಿಂದೆ ಬೈರೂತ್​ ಮೇಲೆ ಇಸ್ರೇಲ್​ ದಾಳಿ ನಡೆಸಿತ್ತು. ನೆತಾನ್ಯಾಹುರ ಈ ನಡೆಯನ್ನು ಖಂಡಿಸಿದ ಅವರು, ಇಸ್ರೇಲ್​ನ ಈ ನಿರ್ಧಾರ ನನಗೆ ನಿಜಕ್ಕೂ ಇಷ್ಟವಾಗಲಿಲ್ಲ. ನಾನಿಲ್ಲದೆ ಇಸ್ರೇಲ್​ ಇರುತ್ತಿರಲಿಲ್ಲ . ಯಾಕೆಂದರೆ ನಾನು ಮಾಡಿದ ಸಹಾಯದಂತೆ ಬೇರೆ ಯಾವುದೇ ಅಧ್ಯಕ್ಷರು ಇಸ್ರೇಲ್​ಗೆ ಮಾಡಿಕೊಡಲು ಸಿದ್ಧರಿರಲಿಲ್ಲ' ಎಂದು ಟ್ರಂಪ್​ ಹೇಳಿದ್ದಾರೆ.

ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ತೇವೆ

'ನಮ್ಮ ಅತ್ಯುನ್ನತ ರಾಜಕೀಯ ಮತ್ತು ಧಾರ್ಮಿಕ ನಾಯಕ ಖಮೇನಿ ಹತ್ಯೆ ವಿರುದ್ಧ ಟೆಹ್ರಾನ್ ಸೇಡು ತೀರಿಸಿಕೊಳ್ಳುತ್ತದೆ. ಇಲ್ಲಿನ ಹಿರಿಯ ಮಿಲಿಟರಿ ಅಧಿಕಾರಿಗಳು, ರಾಜಕೀಯ ನಾಯಕರನ್ನು ಕೊಂದ ರಾಕ್ಷಸ ರಾಷ್ಟ್ರ' ಅದು ಎಂದು ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಸದಸ್ಯರೊಬ್ಬರು ಕಿಡಿಕಾರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net