ಮಹಿಳಾ ಅಭಿಮಾನಿಯ ಫೋನ್ ಕಿತ್ತುಕೊಂಡು ತಳ್ಳಿದ ನಟ ಲಿಂಗ್ ಚಾವೊ! Ling Chao ವಿಡಿಯೋ ವೈರಲ್..

Ling Chao
Ling Chao
Published on
ಚೀನಾ: ( Ling Chao ) ಚೀನಾದ ಜನಪ್ರಿಯ ನಟ ಮತ್ತು ಗಾಯಕ ಲಿಂಗ್ ಚಾವೋ (Ling Chao) ಅವರು ವಿಮಾನ ನಿಲ್ದಾಣದಲ್ಲಿ ಮಹಿಳಾ ಅಭಿಮಾನಿಯನ್ನು ಥಳಿಸಿದ್ದಾರೆ. ಈ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವಿವಾದ ಸೃಷ್ಟಿಸಿದೆ.
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಲಿಂಗ್ ಚಾವೋ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ ಮಹಿಳಾ ಅಭಿಮಾನಿಯೊಬ್ಬರ ಫೋನ್ ಅನ್ನು ಲಿಂಗ್ ಚಾವೋ ಅವರು ಬಲವಂತವಾಗಿ ಕಸಿದುಕೊಂಡಿದ್ದಾರೆ. ಜನಸಂದಣಿಯ ನಡುವೆ ಮತ್ತೊಬ್ಬ ಮಹಿಳಾ ಅಭಿಮಾನಿಯನ್ನು ಅವರು ಜೋರಾಗಿ ತಳ್ಳಿದ್ದು, ಆಕೆ ನೆಲಕ್ಕೆ ಬಿದ್ದಿದ್ದಾರೆ.
ನಂತರ ಸಿಬ್ಬಂದಿಯೊಬ್ಬರು ಮಧ್ಯಪ್ರವೇಶಿಸಿ ಗಾಯಕನನ್ನು ದೂರ ಎಳೆದುಕೊಂಡು ಹೋಗುತ್ತಾರೆ. ಈ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೆಲವು ಕ್ಷಣಗಳ ನಂತರ ಪಾರ್ಕಿಂಗ್ ಪ್ರದೇಶದಲ್ಲಿ ರೆಕಾರ್ಡ್ ಮಾಡಲಾಗಿದೆ ಎಂದು ನಂಬಲಾದ ಮತ್ತೊಂದು ಕ್ಲಿಪ್‌ನಲ್ಲಿ, ಲಿಂಗ್ ಚಾವೊ ಕಾರಿನ ಬಾಗಿಲು ತೆರೆಯುವುದನ್ನು, ಹತ್ತಿರದಲ್ಲಿ ನಿಂತಿದ್ದ ಮಹಿಳೆಯ ಕಡೆಗೆ ಕೈ ಚಾಚಿ ಅವನನ್ನು ಚಿತ್ರೀಕರಿಸುವುದನ್ನು, ಆಕೆಯ ಫೋನ್ ಕಸಿದುಕೊಂಡು ಎಸೆದು ವಾಹನಕ್ಕೆ ಹಿಂತಿರುಗುವುದನ್ನು ತೋರಿಸುತ್ತದೆ.
ಈ ಘಟನೆ ವಿವಾದಕ್ಕೀಡಾದ ಬೆನ್ನಲ್ಲೇ ಲಿಂಗ್ ಚಾವೋ ಅವರ ಮ್ಯಾನೇಜ್‌ಮೆಂಟ್ ಏಜೆನ್ಸಿ Qin's Entertainment ಅಧಿಕೃತ ಪ್ರಕಟಣೆ ಹೊರಡಿಸಿದೆ.
ಅಭಿಮಾನಿಗಳೊಂದಿಗೆ ನಡೆದ ಅಹಿತಕರ ಘಟನೆಗಾಗಿ ಏಜೆನ್ಸಿ ಕ್ಷಮೆಯಾಚಿಸಿದೆ.ವಿಮಾನ ನಿಲ್ದಾಣದಲ್ಲಿ 'ಅತಿಯಾಗಿ ಬೆನ್ನಟ್ಟುವ ಅಭಿಮಾನಿಗಳು..ನಟನ ಖಾಸಗಿತನಕ್ಕೆ ಧಕ್ಕೆ ತಂದಿದ್ದರು ಮತ್ತು ಭದ್ರತೆಗೆ ತೊಂದರೆ ಉಂಟುಮಾಡಿದ್ದರು. ಕಲಾವಿದರ ಮೇಲೆ ಮುಗಿಬೀಳದಂತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶಿಸ್ತು ಕಾಪಾಡುವಂತೆ ಅಭಿಮಾನಿಗಳಿಗೆ ಮನವಿ ಏಜೆನ್ಸಿ ಮಾಡಿದೆ.

ಲಿಂಗ್ ಚಾವೋ ಯಾರು?

ಲಿಂಗ್ ಚಾವೋ ಚೀನಾದ ಜನಪ್ರಿಯ ನಟ ಮತ್ತು ಗಾಯಕ ಪ್ರಸಿದ್ಧ 'ಐಡಲ್' ಆಗಿದ್ದು, ಇವರು ONER ಎಂಬ ಬಾಯ್ ಬ್ಯಾಂಡ್‌ನ ಸದಸ್ಯರಾಗಿದ್ದಾರೆ. ಇವರು ಚೀನಾದ ಜನಪ್ರಿಯ ರಿಯಾಲಿಟಿ ಶೋ 'ಐಡಲ್ ಪ್ರೊಡ್ಯೂಸರ್' (Idol Producer) ಮೂಲಕ ಖ್ಯಾತಿ ಪಡೆದಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net