ಈ ರಾಕೆಟ್ಗೆ ಬಳಸಿದ ಭಾಗಗಳಲ್ಲಿ ಒಂದು ಇನ್ನೂ ಸ್ವಲ್ಪ ದೂರದಲ್ಲಿ ಸುತ್ತುತ್ತಿದೆ ಎನ್ನಲಾಗಿದೆ. ಅಸ್ಥಿರ ಕಕ್ಷೆಯಲ್ಲಿ ಬಿಟ್ಟ ಕಾರಣ, ಅದು ಚಂದ್ರನ ಕಡೆಗೆ ಮುಖಮಾಡಿದ್ದು, ಆಗಸ್ಟ್ 5ರಂದು ಅತಿ ವೇಗದಲ್ಲಿ ಚಂದ್ರನಿಗೆ ಅಪ್ಪಳಿಸುವ ಭೀತಿ ಎದುರಾಗಿದೆ. ಭೂಮಿಗೆ ಮರಳಲು ರಾಕೆಟ್‌ನಲ್ಲಿ ಸಾಕಷ್ಟು ಇಂಧನವಿಲ್ಲದ ಹಿನ್ನಲೆ ಜೊತೆಗೆ ಚಂದ್ರನ ಗುರುತ್ವಾಕರ್ಷಣೆಯ ಬಲದಿಂದಾಗಿ, ಆಗಸ್ಟ್ನಲ್ಲಿ ಗಂಟೆಗೆ 8700 ಕಿ.ಮೀ ವೇಗದಲ್ಲಿ ಅಪ್ಪಳಿಸಿ, ಕುಸಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.