ಪ್ರಸ್ತುತ ಪರಿಸ್ಥಿತಿಯಲ್ಲಿ, ಖಾರ್ಗ್ ದ್ವೀಪವನ್ನು ವಶಪಡಿಸಿಕೊಳ್ಳುವುದು ಅಮೆರಿಕಕ್ಕೆ ಅತ್ಯಂತ ಅಪಾಯಕಾರಿ ಕಾರ್ಯಾಚರಣೆ. ಇದು ಜಾಗತಿಕವಾಗಿ ದೊಡ್ಡ ಪರಿಣಾಮ ಬೀರಲಿದೆ. ಈ ಕಾರ್ಯಾಚರಣೆ ಏನಾದರೂ ಪ್ರಾರಂಭವಾದರೆ, ಇರಾನ್ ನೇರವಾಗಿ ಅಮೆರಿಕದ ಸೈನಿಕರ ಮೇಲೆ ನೇರ ದಾಳಿ ನಡೆಸುವ ಎಲ್ಲ ಸಾಧ್ಯತೆಯಿದೆ. ಶ್ವೇತಭವನ ಮತ್ತು ಪೆಂಟಗನ್ ಪ್ರಸ್ತುತ, ಇರಾನ್‌ಗೆ ಹೆಚ್ಚುವರಿ ಪಡೆಗಳನ್ನು ಕಳುಹಿಸುವ ಬಗ್ಗೆ ಚರ್ಚಿಸುತ್ತಿವೆ ಎಂದು ವರದಿಯಾಗಿದೆ. ಇದು ಯಾವ ಹಂತಕ್ಕೆ ಹೋಗಿ ತಲುಪಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).