ಫೆಬ್ರವರಿ 28 ರಿಂದ ತೀವ್ರಗೊಂಡಿರುವ ಈ ಸಂಘರ್ಷಕ್ಕೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಗಳೇ ಕಾರಣ ಎಂದು ರಷ್ಯಾ ನೇರವಾಗಿ ಆರೋಪಿಸಿದೆ. ವಿಶೇಷವಾಗಿ ಇರಾನ್‌ನ ಪ್ರಭಾವಿ ಭದ್ರತಾ ನಾಯಕ ಅಲಿ ಲಾರಿಜಾನಿ ಅವರನ್ನು ಇಸ್ರೇಲ್ ಹತ್ಯೆ ಮಾಡಿರುವುದನ್ನು ಕ್ರೆಮ್ಲಿನ್ ಕಟುವಾಗಿ ಖಂಡಿಸಿದೆ. ರಷ್ಯಾ ಸದ್ಯಕ್ಕೆ ನೇರವಾಗಿ ಯುದ್ಧಭೂಮಿಗೆ ಇಳಿಯದಿದ್ದರೂ, ಇರಾನ್‌ಗೆ ಬೃಹತ್ ಪ್ರಮಾಣದ ಮಾನವೀಯ ನೆರವು ನೀಡುತ್ತಿದೆ. ಆದರೆ, ಅಮೆರಿಕದ ಗುಪ್ತಚರ ವರದಿಗಳ ಪ್ರಕಾರ, ರಷ್ಯಾ ಇರಾನ್‌ಗೆ ಡ್ರೋನ್ ಮತ್ತು ಮಿಸೈಲ್ ಕಾರ್ಯಾಚರಣೆಗಳಿಗಾಗಿ ಅತ್ಯಾಧುನಿಕ ಮಿಲಿಟರಿ ಇಂಟೆಲಿಜೆನ್ಸ್ ಹಂಚಿಕೊಳ್ಳುತ್ತಿದೆ ಎಂಬ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.