ಬೆಂಗಳೂರು: ಬದುಕು ಮತ್ತು ಸಾವು ಪ್ರಕೃತಿಯ ನಿಯಮ. ಆದರೆ, ಸಾಯುವ ಕೊನೆಯ ಕ್ಷಣದಲ್ಲಿ ಮನುಷ್ಯನಿಗೆ ಕೋಟಿ ರೂಪಾಯಿ ಆಸ್ತಿಗಿಂತಲೂ ಹೆಚ್ಚಾಗಿ ಬೇಕಿರುವುದು ಪ್ರೀತಿ ಮತ್ತು(Humanity) ನಿರಾಳತೆ. ಇಂತಹದ್ದೇ ಒಂದು ಘಟನೆ(ಅಮೆರಿಕದಲ್ಲಿ ನಡೆದ ಘಟನೆ) ಅಮೆರಿಕದ ಮಹಿಳೆಯೊಬ್ಬರ ಬದುಕಿನ ಹಾದಿಯನ್ನೇ ಸಂಪೂರ್ಣವಾಗಿ ಬದಲಾಯಿಸಿದೆ. ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ರೋಗಿಯೊಬ್ಬರೊಂದಿಗಿನ ಭಾವನಾತ್ಮಕ ಭೇಟಿಯ ನಂತರ, ಆಕೆ ತನ್ನ ಕಾರ್ಪೊರೇಟ್ ವೃತ್ತಿಜೀವನವನ್ನೇ ತ್ಯಜಿಸಿ, ಈಗ ‘ಡೆತ್ ಡೂಲಾ’ (Death Doula - ಮರಣದ ಸಹವರ್ತಿ/ದೂತಿ) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.