_1785262212160.webp?w=480&auto=format%2Ccompress&fit=max)
_1785262212160.webp?w=480&auto=format%2Ccompress&fit=max)
ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಯುವಕರು ಮತ್ತು ಉದ್ಯೋಗಿಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಟ್ರೇಲಿಯಾಕ್ಕೆ ವಲಸೆ ಹೋಗಲು ಆಸಕ್ತಿ ತೋರಿಸುತ್ತಿದ್ದಾರೆ. ಅಮೆರಿಕದಲ್ಲಿ ಎದುರಾಗುತ್ತಿರುವ ತೀವ್ರ ಮಟ್ಟದ ಗ್ರೀನ್ ಕಾರ್ಡ್ ಸಮಸ್ಯೆ ಮತ್ತು ಎಚ್-1ಬಿ ವೀಸಾದ ಅನಿಶ್ಚಿತತೆಗಳು ಇದಕ್ಕೆ ಮುಖ್ಯ ಕಾರಣವಾಗಿವೆ. ಇದಕ್ಕೆ ವಿರುದ್ಧವಾಗಿ, ಆಸ್ಟ್ರೇಲಿಯಾವು ವೇಗವಾಗಿ ಮತ್ತು ಪ್ರತಿಭೆಯ ಆಧಾರದ ಮೇಲೆ ಪರ್ಮನೆಂಟ್ ರೆಸಿಡೆನ್ಸಿ (ಪಿಆರ್) ಪಡೆಯುವ ಅವಕಾಶಗಳನ್ನು ನೀಡುತ್ತಿದೆ. ಇದು ಭಾರತೀಯ ಯುವಕರನ್ನು ಆಕರ್ಷಿಸಿದ್ದು, ಅಮೆರಿಕದಿಂದ ಆಸ್ಟ್ರೇಲಿಯಾಕ್ಕೆ ವೃತ್ತಿಪರರ ವಲಸೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈ ಬೆಳವಣಿಗೆ ಕುರಿತಾದ ವಿವರ ಇಲ್ಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತೀಯ ವೃತ್ತಿಪರರು ತಕ್ಕ ಉತ್ತರ ನೀಡಿದ್ದಾರೆ. ಎಚ್-1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸಿದ್ದರಿಂದ ಭಾರತೀಯ ಯುವ ಪ್ರತಿಭೆಗಳು ಈಗ ಆಸ್ಟ್ರೇಲಿಯಾದತ್ತ ಮುಖ ಮಾಡುತ್ತಿದ್ದಾರೆ. ಆಸ್ಟ್ರೇಲಿಯಾದ ಗೃಹ ಸಚಿವಾಲಯದ ಪ್ರಕಾರ, 2025-26ರ ಅವಧಿಯಲ್ಲಿ ಕಾಯಂ ನುರಿತ ವಲಸೆಗೆ (ಕಛ್ಟಿಞಚ್ಞಛ್ಞಿಠಿ ಖkಜ್ಝಿ್ಝ Mಜಿಜ್ಟಚಠಿಜಿಟ್ಞ) ಭಾರತವು ಅತಿದೊಡ್ಡ ಮೂಲ ದೇಶವಾಗಿ ಹೊರಹೊಮ್ಮಿದೆ. ಈ ಅವಧಿಯಲ್ಲಿ 14,500 ಭಾರತೀಯರಿಗೆ ಸ್ಕಿಲ್ ವೀಸಾ ದೊರೆತಿದೆ. ಇವರಲ್ಲಿ ಹೆಚ್ಚಿನ ವೃತ್ತಿಪರರು ಅಮೆರಿಕ ದಿಂದ ಆಸ್ಟ್ರೇಲಿಯಾಕ್ಕೆ ವಲಸೆಯಾಗಿದ್ದಾರೆ. ಆದರೆ 2024-25ರಲ್ಲಿ ಭಾರತೀಯರಿಗೆ ಲಭಿಸಿದ್ದು 2 ಸಾವಿರ ಸ್ಕಿಲ್ ಮೈಗ್ರೇಷನ್ ವೀಸಾಗಳು ಮಾತ್ರ. ಅಂದರೆ ಅಮೆರಿಕದಿಂದ ಭಾರತೀಯ ವೃತ್ತಿಪರರ ಸ್ಕಿಲ್ ಮೈಗ್ರೇಷನ್ ವೀಸಾದಲ್ಲಿ 7 ಪಟ್ಟು ಹೆಚ್ಚು ಏರಿಕೆಯಾಗಿದೆ. ಒಟ್ಟು ಸ್ಕಿಲ್ ವೀಸಾಗಳಲ್ಲಿ ಭಾರತೀಯರಿಗೆ 48 ಸಾವಿರ ವೀಸಾಗಳು ಲಭಿಸಿವೆ. 19 ಸಾವಿರ ಜನರಿಗೆ ತಾತ್ಕಾಲಿಕ ಸ್ಕಿಲ್ ವೀಸಾ ಸಿಕ್ಕಿದೆ. ಈ ವಿಭಾಗದಲ್ಲಿ ವೀಸಾ ಪಡೆದವರಲ್ಲಿ ಭಾರತೀಯರು ಮೊದಲ ಸ್ಥಾನದಲ್ಲಿದ್ದಾರೆ.
ಆಸ್ಟ್ರೇಲಿಯಾದ ಅತಿ ದೊಡ್ಡ ಗೇಮ್ ಚೇಂಜರ್ ಎಂದರೆ ಸಬ್ಕ್ಲಾಸ್ 482 ವೀಸಾ. ಅಮೆರಿಕದ ಎಚ್-1ಬಿ ವೀಸಾಗೆ ಸಮಾನವಾದ ಈ ವೀಸಾದ ಶುಲ್ಕ -ಠಿ;6 ಲಕ್ಷ ರೂಪಾಯಿ, ಆದರೆ ಎಚ್-1ಬಿ ವೀಸಾದ ಶುಲ್ಕ -ಠಿ;1 ಕೋಟಿ ರೂಪಾಯಿ ಆಗಿದೆ. 482-ವೀಸಾದಲ್ಲಿ ಯಾವುದೇ ವಾರ್ಷಿಕ ಗರಿಷ್ಠ ಮಿತಿ ಇಲ್ಲ. ಆದರೆ ಎಚ್-1ಬಿ ವೀಸಾದ ಗರಿಷ್ಠ ಮಿತಿ ಪ್ರಸ್ತುತ 85 ಸಾವಿರ ಇದ್ದು, ಹೊಸ ವೀಸಾ ಮಸೂದೆಯಲ್ಲಿ ಇದನ್ನು 25 ಸಾವಿರಕ್ಕೆ ಇಳಿಸಲು ಪ್ರಸ್ತಾಪಿಸಲಾಗಿದೆ.
ಆಸ್ಟ್ರೇಲಿಯಾದ ವಿದೇಶಾಂಗ ಸಚಿವಾಲಯದ ಪ್ರಕಾರ, ಭಾರತೀಯ ಯುವಸಮೂಹ ಉನ್ನತ ಶಿಕ್ಷಣ ಪಡೆದ ಸಮುದಾಯವಾಗಿದೆ. ಹೆಚ್ಚಿನ ಮೊದಲ ಪೀಳಿಗೆಯ ವಲಸಿಗರು 25ರಿಂದ 44 ವರ್ಷ ವಯಸ್ಸಿನವರಾಗಿದ್ದಾರೆ. ಇವರಲ್ಲಿ 68% ಜನರು ಬ್ಯಾಚಲರ್ ಪದವಿ ಅಥವಾ ಉನ್ನತ ಶಿಕ್ಷಣವನ್ನು ಹೊಂದಿದ್ದಾರೆ. ಇದು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ.
ಗ್ರೀನ್ ಕಾರ್ಡ್ ಜಂಜಾಟ: ಅಮೆರಿಕದಲ್ಲಿ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಗಾಗಿ ಭಾರತೀಯರು ದಶಕಗಳ ಕಾಲ ಕಾಯಬೇಕಾದ ಪರಿಸ್ಥಿತಿ ಇದೆ. ಇದು ಯುವಕರನ್ನು ಪದೇಪದೆ ತಾತ್ಕಾಲಿಕ ವೀಸಾ ನವೀಕರಣಗಳ ಚಕ್ರಕ್ಕೆ ಸಿಲುಕಿಸಿದೆ.
ಎಚ್1-ಬಿ ವೀಸಾ ಅನಿಶ್ಚಿತತೆ: ಎಚ್1-ಬಿ ವೀಸಾಕ್ಕಾಗಿ ಲಾಟರಿ ವ್ಯವಸ್ಥೆ ಮತ್ತು ಸಂಗಾತಿಯ ಕೆಲಸದ ಮೇಲಿರುವ ನಿರ್ಬಂಧಗಳು (ಎಚ್-4 ವೀಸಾ) ದಂಪತಿಯನ್ನು ಆಸ್ಟ್ರೇಲಿಯಾದತ್ತ ಮುಖ ಮಾಡುವಂತೆ ಮಾಡುತ್ತಿವೆ. ಆಸ್ಟ್ರೇಲಿಯಾದಲ್ಲಿ ದಂಪತಿ ನಿರ್ಬಂಧವಿಲ್ಲದೆ ಸಂಪಾದಿಸುವ ವಾತಾವರಣವಿದೆ.
ಆಸ್ಟ್ರೇಲಿಯಾ ಸರ್ಕಾರವು ನುರಿತ ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಆಕರ್ಷಿಸಲು ಕೆಲವು ವಿಶೇಷ ವೀಸಾ ಆಯ್ಕೆಗಳನ್ನು ನೀಡುತ್ತಿದೆ.
1. ಮೇಟ್ಸ್ ವೀಸಾ (MATES Visa-Mobility Arrangement for Talented Early-professionals scheme): 18ರಿಂದ 30 ವರ್ಷ ವಯಸ್ಸಿನ 3,000 ಅತ್ಯುತ್ತಮ ಭಾರತೀಯ ಪದವೀಧರರಿಗೆ ಯಾವುದೇ ಉದ್ಯೋಗದಾತರ ಸ್ಪಾನ್ಸರ್ಶಿಪ್ ಇಲ್ಲದೆ 2 ವರ್ಷಗಳ ಕಾಲ ಆಸ್ಟ್ರೇಲಿಯಾದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅವಕಾಶ ನೀಡುವ ವಿಶೇಷ ಮಾರ್ಗ ಇದಾಗಿದೆ. ಮಾಹಿತಿ-ತಂತ್ರಜ್ಞಾನ (ಐಟಿ), ಕೃತಕ ಬುದ್ಧಿಮತ್ತೆ (ಎಐ), ಫಿನ್ಟೆಕ್ ಮತ್ತು ಇಂಜಿನಿಯರಿಂಗ್ ಕ್ಷೇತ್ರಗಳು ಇದಕ್ಕೆ ಅರ್ಹವಾಗಿವೆ.
2. ಸ್ಕಿಲ್ಡ್ ಇಂಡಿಪೆಂಡೆಂಟ್ ವೀಸಾ (ಸಬ್ಕ್ಲಾಸ್ 189): ಬೇಡಿಕೆಯಲ್ಲಿ ಇರುವ ಉದ್ಯೋಗಗಳಿಗಾಗಿ ನೀಡಲಾಗುವ ಪಾಯಿಂಟ್ಸ್-ಆಧಾರಿತ ಪಿಆರ್ ವೀಸಾ ಇದಾಗಿದೆ. ಇದಕ್ಕೆ ಯಾವುದೇ ರಾಜ್ಯ ಅಥವಾ ಉದ್ಯೋಗದಾತರ ನಾಮನಿರ್ದೇಶನ ಅಗತ್ಯವಿರುವುದಿಲ್ಲ.
3. ಸ್ಕಿಲ್ಡ್ ನಾಮಿನೇಟೆಡ್ ವೀಸಾ (ಸಬ್ಕ್ಲಾಸ್ 190): ಇದು ರಾಜ್ಯ-ಪ್ರಾಯೋಜಿತ ಪಿಆರ್ ಮಾರ್ಗವಾಗಿದ್ದು, ಆಸ್ಟ್ರೇಲಿಯಾದ ಪ್ರಾಂತ್ಯಗಳು ತಮ್ಮ ಸ್ಥಳೀಯ ಆರ್ಥಿಕ ಕೊರತೆಯನ್ನು ನೀಗಿಸಲು ನುರಿತ ಸಿಬ್ಬಂದಿಯನ್ನು ನಾಮನಿರ್ದೇಶನ ಮಾಡುತ್ತವೆ.
4. ನ್ಯಾಷನಲ್ ಇನ್ನೋವೇಶನ್ ವೀಸಾ (ಎನ್ಐವಿ): ತಂತ್ರಜ್ಞಾನ, ವಿಜ್ಞಾನ, ಹಣಕಾಸು ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವೃತ್ತಿಪರರಿಗಾಗಿ ಪರಿಚಯಿಸಲಾದ ವೇಗದ ಗತಿಯ ವೀಸಾ ಕಾರ್ಯಕ್ರಮ.
5. ವರ್ಕ್ ಆಂಡ್ ಹಾಲಿಡೇ ವೀಸಾ (ಸಬ್ಕ್ಲಾಸ್ 462): 18ರಿಂದ 30 ವರ್ಷ ವಯಸ್ಸಿನ 1,000 ಯುವ ಭಾರತೀಯರಿಗೆ 12 ತಿಂಗಳವರೆಗೆ ಆಸ್ಟ್ರೇಲಿಯಾದಲ್ಲಿ ವಾಸಿಸಲು, ಪ್ರಯಾಣಿಸಲು ಮತ್ತು ಅಲ್ಪಾವಧಿಯ ಕೆಲಸ ಮಾಡಲು ಅವಕಾಶ ನೀಡುತ್ತದೆ.
ಆಸ್ಟ್ರೇಲಿಯಾಕ್ಕೆ ಮುಂದಿನ ಎರಡು ವರ್ಷಗಳಲ್ಲಿ ಕನಿಷ್ಠ 1,10,000 ವೃದ್ಧಾಪ್ಯ ಆರೈಕೆದಾರರು ಮತ್ತು 70,000 ನರ್ಸ್ಗಳ ಅಗತ್ಯವಿದೆ. ಫಿಸಿಯೋಥೆರಪಿಸ್ಟ್ ಮತ್ತು ಮೆಡಿಕಲ್ ಲ್ಯಾಬ್ ಸೈಂಟಿಸ್ಟ್ನಂತಹ ಹುದ್ದೆಗಳಿಗೂ ಭಾರಿ ಬೇಡಿಕೆಯಿದೆ. ಆಸ್ಟ್ರೇಲಿಯಾದ -ಠಿ;1.25 ಲಕ್ಷ ಕೋಟಿ ಮೌಲ್ಯದ ಟೆಕ್ ವಲಯವು ಐದು ವರ್ಷಗಳಲ್ಲಿ 80% ಬೆಳೆದಿದೆ. ಟೆಕ್ ಕಾರ್ಯಪಡೆಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ಬಾಂಧವ್ಯವು ಗಮನಾರ್ಹವಾಗಿ ವೃದ್ಧಿಸಿದೆ. ವ್ಯಾಪಾರ ಮತ್ತು ಶಿಕ್ಷಣ ಕ್ಷೇತ್ರಕ್ಕಷ್ಟೇ ಸೀಮಿತವಾಗಿದ್ದ ಈ ಸಂಬಂಧವು ಈಗ ರಕ್ಷಣೆ, ಪ್ರಮುಖ ತಂತ್ರಜ್ಞಾನಗಳು, ಆರ್ಥಿಕ ಸಹಯೋಗ ಹಾಗೂ ಸಾಂಸ್ಕೃತಿಕ ವಿನಿಮಯ ಸೇರಿದಂತೆ ವಿವಿಧ ರಂಗಗಳಿಗೆ ವಿಸ್ತರಿಸಿದೆ. ಆಸ್ಟ್ರೇಲಿಯಾದಲ್ಲಿ ಭಾರತೀಯ ಸಮುದಾಯದ ಪ್ರಭಾವ ಮತ್ತು ಉಪಸ್ಥಿತಿ ದಿನೇದಿನೇ ಹೆಚ್ಚುತ್ತಿರುವುದು ಈ ಪ್ರಗತಿಗೆ ಪ್ರಮುಖ ಕಾರಣವಾಗಿದೆ. ಪ್ರಸ್ತುತ, ಆಸ್ಟ್ರೇಲಿಯಾದಲ್ಲಿ ವಿದೇಶಗಳಲ್ಲಿ ಜನಿಸಿ ನೆಲೆಸಿದ ಪ್ರಜೆಗಳಲ್ಲಿ ಭಾರತೀಯರು ಎರಡನೇ ಅತಿ ದೊಡ್ಡ ಗುಂಪಾಗಿದ್ದಾರೆ. ವಾಣಿಜ್ಯ, ಶಿಕ್ಷಣ, ಸಂಶೋಧನೆ, ಸಂಸ್ಕೃತಿ ಮತ್ತು ನಾವೀನ್ಯತೆ ಮುಂತಾದ ಕ್ಷೇತ್ರಗಳಲ್ಲಿ ಎರಡೂ ದೇಶಗಳ ನಡುವೆ ಸೇತುವೆಯಾಗಿ ಭಾರತೀಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
2020ರಲ್ಲಿ ಸಹಿ ಹಾಕಲಾದ ‘ವ್ಯಾಪಕ ಆಯಕಟ್ಟಿನ ಪಾಲುದಾರಿಕೆ’ (ಇಟಞಟ್ಟಛಿಜಛ್ಞಿಠಜಿಡಛಿ ಖಠ್ಟಿಚಠಿಛಿಜಜ್ಚಿ ಕಚ್ಟಠ್ಞಿಛ್ಟಿಠಜಜಿಟ) ಹಾಗೂ ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದವು ಉಭಯ ದೇಶಗಳ ಬಾಂಧವ್ಯಕ್ಕೆ ಹೊಸ ಬಲ ತಂದಿದೆ. ಇದು ವಿದ್ಯಾರ್ಥಿಗಳು, ವೃತ್ತಿಪರರು, ಸಂಶೋಧಕರು ಮತ್ತು ನುರಿತ ಉದ್ಯೋಗಿಗಳ ಮುಕ್ತ ಸಂಚಾರವನ್ನು ಮತ್ತಷ್ಟು ಸುಲಭಗೊಳಿಸಿದೆ.