ನಾಲ್ಕು ವರ್ಷಗಳ ಹಿಂದೆ ತಮ್ಮ ಏಕಮಾತ್ರ ಪುತ್ರನನ್ನು ಕಳೆದುಕೊಂಡ ವೆಂಡಿ, ದೊಡ್ಡ ಶಾಕ್ಗೆ ಒಳಗಾದರು. ಅವರ ಮಗ ಮಾರ್ಕಸ್, 23ನೇ ವಯಸ್ಸಿನಲ್ಲಿ ದುರಂತ ಅಂತ್ಯ ಕಂಡರು. ಮಲಗಿದ್ದ ವೇಳೆ, ಅವರ ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಟೊಮೆಟೋ ಹೊರಬರದೆ, ಅಲ್ಲೇ ಸಿಕ್ಕಿಕೊಂಡ ಕಾರಣ, ಮಾರ್ಕಸ್ ಉಸಿರುಗಟ್ಟಿ ಪ್ರಾಣಬಿಟ್ಟರು. ಆ ಘಟನೆಯಿಂದ ಭಾರೀ ನೋವುಂಡ ವೆಂಡಿ, ಓವರ್ಡೋಸ್ ಮಾತ್ರೆಗಳನ್ನು ನುಂಗಿ ಸಾಯಲು ಪ್ರಯತ್ನಿಸಿದರು. ಆದರೆ, ಎರಡು ವಾರಗಳ ಕಾಲ ವೆಂಟಿಲೇಟರ್ ಸಹಾಯದಿಂದ ಬದುಕುಳಿದರು.