ಟೆಹ್ರಾನ್: ಮಧ್ಯಪ್ರಾಚ್ಯದ ಸಂಘರ್ಷ ಈಗ ಅತ್ಯಂತ ಅಪಾಯಕಾರಿ ಘಟ್ಟಕ್ಕೆ ಬಂದು ನಿಂತಿದೆ. ಇರಾನ್‌ನ(IranVsUSA) ಬಂದರುಗಳ ಮೇಲೆ ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನವನ್ನು ತಕ್ಷಣವೇ ತೆರವುಗೊಳಿಸದಿದ್ದರೆ, ಪರ್ಷಿಯನ್ ಗಲ್ಫ್, ಓಮನ್ ಸಮುದ್ರ ಮತ್ತು ಕೆಂಪು ಸಮುದ್ರದ ಮೂಲಕ ನಡೆಯುವ ಸಂಪೂರ್ಣ ರಫ್ತು-ಆಮದು ವ್ಯಾಪಾರವನ್ನು ಸ್ಥಗಿತಗೊಳಿಸುವುದಾಗಿ ಇರಾನ್ ಮಿಲಿಟರಿ ಗುಡುಗಿದೆ. ಇರಾನ್‌ನ ಈ ಮಹಾ ದಿಗ್ಬಂಧನದ ಎಚ್ಚರಿಕೆಯು ಜಾಗತಿಕ ತೈಲ ಮಾರುಕಟ್ಟೆ ಮತ್ತು ಆರ್ಥಿಕತೆಯಲ್ಲಿ ತಲ್ಲಣ ಸೃಷ್ಟಿಸಿದೆ.