ಅಯ್ಯೋ ಇದೇನಿದು ವಿಚಿತ್ರ... ಅತ್ಯಂತ ಡೇಂಜರಸ್​ ಹಾವಿನ ವರ್ತನೆ ಕಂಡು ಹೌಹಾರಿದ ನೆಟ್ಟಿಗರು! ವಿಡಿಯೋ ವೈರಲ್​...Venomous Snake

ಅಯ್ಯೋ ಇದೇನಿದು ವಿಚಿತ್ರ... ಅತ್ಯಂತ ಡೇಂಜರಸ್​ ಹಾವಿನ ವರ್ತನೆ ಕಂಡು ಹೌಹಾರಿದ ನೆಟ್ಟಿಗರು! ವಿಡಿಯೋ ವೈರಲ್​...Venomous Snake
ಅಯ್ಯೋ ಇದೇನಿದು ವಿಚಿತ್ರ... ಅತ್ಯಂತ ಡೇಂಜರಸ್​ ಹಾವಿನ ವರ್ತನೆ ಕಂಡು ಹೌಹಾರಿದ ನೆಟ್ಟಿಗರು! ವಿಡಿಯೋ ವೈರಲ್​...Venomous Snake
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತಲೇ ಇರುತ್ತವೆ
  • ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನವನ್ನು ಸೆಳೆದು ವೈರಲ್​ ಆಗಿಬಿಡುತ್ತವೆ
  • ವೈರಲ್​ ಆಗುವ ವಿಡಿಯೋಗಳಲ್ಲಿ ಹಾವಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ಒಂದು
Venomous Snake : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನವನ್ನು ಸೆಳೆದು ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.
ಹಾವುಗಳೆಂದರೆ ಮನುಷ್ಯನಿಗೆ ವಿಶೇಷ ಆಸಕ್ತಿ. ಹಾವನ್ನು ಕಂಡರೆ ಭಯಪಟ್ಟರು ಕೂಡ ಹಾವಿನ ಬಗ್ಗೆ ತಿಳಿದುಕೊಳ್ಳಲು ಭಾರಿ ಕುತೂಹಲವೊಂದಿರುತ್ತಾನೆ. ಹೀಗಾಗಿ ಹಾವಿಗೆ ಸಂಬಂಧಿಸಿದ ಸಾವಿರಾರು ವಿಡಿಯೋಗಳು ಜಾಲತಾಣದಲ್ಲಿ ವೈರಲ್​ ಆಗಿ, ನೆಟ್ಟಿಗರ ಗಮನ ಸೆಳೆಯುತ್ತದೆ. ಅದೇ ರೀತಿ ಹಾವೊಂದರ ವಿಡಿಯೋ ಇದೀಗ ವೈರಲ್​ ಆಗಿದ್ದು, ಅದನ್ನು ನೋಡಿದ ನೆಟ್ಟಿಗರು ಹುಬ್ಬೇರಿಸಿದ್ದಾರೆ. 
ಆಫ್ರಿಕಾದ ಹಾವಿನ ವಿಡಿಯೋವೊಂದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ನೀಲಿ ಹಾವು ಆಫ್ರಿಕಾದಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವು. ಈ ಹಾವು ತುಂಬಾನೇ ಡೇಂಜರ್​. ಆದರೆ, ಈ ಹಾವು ನೆಟ್ಟಗೆ ನಿಂತು ಡಾನ್ಸ್​ ಮಾಡುತ್ತಿರುವ ದೃಶ್ಯ ವೈರಲ್ ಆಗುತ್ತಿರುವ​ ವಿಡಿಯೋದಲ್ಲಿದೆ. ಇದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಇದೇನಿದು ವಿಚಿತ್ರ ಎಂದು ಕಾಮೆಂಟ್​ ಮಾಡುತ್ತಿದ್ದಾರೆ.
ಅಂದಹಾಗೆ, ವಿಡಿಯೋದಲ್ಲಿ ಹಾವು ನೃತ್ಯ ಮಾಡುತ್ತಿದೆ. ತನ್ನ ದೇಹವನ್ನು ಬಳಕುವ ಬಳ್ಳಿಯಂತೆ ಬಳಕಿಸುತ್ತಿದೆ. ವಿಡಿಯೋದ ಹಿನ್ನೆಲೆಯಲ್ಲಿ ಒಂದು ಹಾಡು ಕೂಡ ಪ್ಲೇ ಆಗುತ್ತದೆ. ಈ ಆಸಕ್ತಿದಾಯಕ ವಿಡಿಯೋವನ್ನು 'nkosenathikoel' ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈಗಾಗಲೇ ಸಾವಿರಾರು ಮಂದಿ ಈ ವಿಡಿಯೋವನ್ನು ನೋಡಿದ್ದು, ಬಗೆಬಗೆಯ ಕಾಮೆಂಟ್‌ಗಳನ್ನು ಹರಿಬಿಡುತ್ತಿದ್ದಾರೆ. 
ಈ ವಿಡಿಯೋವನ್ನು ನೋಡಿದಾಗ ನನಗೆ ಒಂದು ರೀತಿಯಲ್ಲಿ ರೋಮಾಂಚನವಾಯಿತು. ನಿಜಕ್ಕೂ ಹಾವು ನೃತ್ಯ ಮಾಡುತ್ತಿದೆಯೇ? ಇದು ಎಐ ವಿಡಿಯೋನಾ? ನಿಜವಾಗಿಯೂ ಅಲ್ಲಿ ಏನು ನಡೆಯುತ್ತಿದೆ? ಇದೇನಿದು ವಿಚಿತ್ರ ಎಂದೆಲ್ಲ ಕಾಮೆಂಟ್​ ಮಾಡುತ್ತಿದ್ದಾರೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂದು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net