ಹಿಂದೆ ನಡೆದ ಇರಾಕ್-ಇರಾನ್ ಯುದ್ಧ ಅಥವಾ ಅರಬ್ ವಸಂತದ ಅವಧಿಯಲ್ಲೂ ದುಬೈ ಸುರಕ್ಷಿತವಾಗಿತ್ತು. ಆದರೆ, ಈ ಬಾರಿ ಇರಾನ್ ಬೆಂಬಲಿತ ಸಂಘಟನೆಗಳ ಡ್ರೋನ್ ದಾಳಿಗಳು ದುಬೈನ ಗಡಿಯ ಸಮೀಪವೇ ನಡೆದಿರುವುದು ಗಂಭೀರ ಚಿಂತನೆಗೆ ಕಾರಣವಾಗಿದೆ. ಆದರೂ, ಯುಎಇ ಸರ್ಕಾರವು ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿದ್ದು, ಹೂಡಿಕೆದಾರರಲ್ಲಿ ವಿಶ್ವಾಸ ತುಂಬುವ ಪ್ರಯತ್ನ ನಡೆಸುತ್ತಿದೆ,(ಏಜೆನ್ಸೀಸ್).