ಪಾಕಿಸ್ತಾನದ ಶೇ. 80 ರಷ್ಟು ಜನ ಸಲಿಂಗಿಗಳು: ನಮ್ಮಲ್ಲಿ ಒಬ್ಬನೂ ಗಂಡಸಿಲ್ಲ; ವೈರಲ್​ ಆಗ್ತಿದೆ ಹಿನಾ ಬಲೋಚ್​ ಹೇಳಿಕೆ! Hina Baloch

ಪಾಕಿಸ್ತಾನದ ಜನರ ಲೈಂಗಿಕತೆಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಹಿನಾ ಬಲೋಚ್​
ಪಾಕಿಸ್ತಾನದ ಜನರ ಲೈಂಗಿಕತೆಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಹಿನಾ ಬಲೋಚ್​
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನದಲ್ಲಿರುವ ಶೇ. 80 ರಷ್ಟು ಜನ ಸಲಿಂಗಿಗಳು, 20 ರಷ್ಟು ಜನ ದ್ವಿಲಿಂಗಿಗಳು
  • ನಮ್ಮ ದೇಶದಲ್ಲಿ ಒಬ್ಬನೂ ಗಂಡಸಿಲ್ಲ
  • ಪಾಕಿಸ್ತಾನದ ಜನರ ಲೈಂಗಿಕತೆಯ ಬಗ್ಗೆ ಗಂಭೀರ ಹೇಳಿಕೆ ನೀಡಿದ ಹಿನಾ ಬಲೋಚ್​
ಇಸ್ಲಾಮಾಬಾದ್​: ಪಾಕಿಸ್ತಾನದಲ್ಲಿರುವ ಜನರ ಲೈಂಗಿಕತೆಯ ಬಗ್ಗೆ ಅಲ್ಲಿನ ಲೈಂಗಿಕ ಅಲ್ಪಸಂಖ್ಯಾತರ ಕಾರ್ಯಕರ್ತೆ ಹಿನಾ ಬಲೋಚ್ (Hina Baloch) ನೀಡಿರುವ ಹೇಳಿಕೆಯೊಂದು ಸಖತ್​ ವೈರಲ್​ ಆಗುತ್ತಿದೆ.
ಪಾಕಿಸ್ತಾನದಲ್ಲಿರುವ ಶೇಕಡ 80 ರಷ್ಟು ಜನ ಸಲಿಂಗಕಾಮಿಗಳಾಗಿದ್ದಾರೆ ಮತ್ತು ಉಳಿದ ಶೇಕಡ 20 ರಷ್ಟು ಜನ ದ್ವಿಲಿಂಗಿ(ಬೈಸೆಕ್ಷುವಲ್​)ಗಳಾಗಿದ್ದಾರೆ ಎಂದು ಹಿನಾ ಬಲೋಚ್ ನೀಡಿರುವ ಹೇಳಿಕೆ ಈಗ ಪ್ರಪಂಚದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಪಾಕಿಸ್ತಾನದಲ್ಲಿ ಒಬ್ಬನೂ ಸ್ಟ್ರೇಟ್​ ಇಲ್ಲ!

ಕ್ವೀರ್ ಗ್ಲೋಬಲ್ ಎಂಬ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಿನಾ ಬಲೋಚ್, ಪಾಕಿಸ್ತಾನಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಸಲಿಂಗಿ ಕಾಮಿಗಳಾಗಿದ್ದರೆ ಉಳಿದವರು ದ್ವಿಲಿಂಗಿಗಳಾಗಿದ್ದಾರೆ. ಆದರೆ ಧರ್ಮ, ಮನೆತನದ ಗೌರವದ ಹಿನ್ನಲೆಯಲ್ಲಿ ಇದನ್ನು ಅವರು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ನನ್ನ ಪ್ರಕಾರ, ಪಾಕಿಸ್ತಾನದ ಬಹುತೇಕರು ಸಲಿಂಗಕಾಮ ಮತ್ತು ದ್ವಿಲಿಂಗಿಗಳು ಆಗಿರುವ ಕಾರಣ, ಇಲ್ಲಿ ಯಾರೊಬ್ಬರು ಲೈಗಿಂಕವಾಗಿ ನೇರ(ಸ್ಟ್ರೇಟ್​) ವಾಗಿಲ್ಲ ಎನ್ನುವುದು ನನ್ನ ಅಭಿಪ್ರಾಯವಾಗಿದೆ ಎಂದು ಅವರು ಹೇಳಿದ್ದಾರೆ.

ಧರ್ಮಕ್ಕೆ ಹೆದರಿ ಲೈಂಗಿಕತೆಯನ್ನು ಮುಚ್ಚಿಟ್ಟಿದ್ದಾರೆ

ಪಾಕಿಸ್ತಾನದ ಜನರು ತಮ್ಮ ಲೈಂಗಿಕತೆಯನ್ನು ಪ್ರಪಂಚದಿಂದ ದೂರವಿಟ್ಟಿದ್ದಾರೆ. ಇಲ್ಲಿಯ ಜನರು ಧರ್ಮಕ್ಕೆ ಬಹಳ ಹೆದರುವ ಕಾರಣ ಅವರು ಇದನ್ನು ಬಹಿರಂಗ ಪಡಿಸಲು ಭಯಪಡುತ್ತಾರೆ. ಹೀಗಾಗಿ ಇಲ್ಲಿಯ ಜನರು ಲೈಂಗಿಕವಾಗಿ ನೇರವಾಗಿಲ್ಲವಾದರೂ ತಾವು ಬಹಳ ಮಡಿವಂತರು ಎಂಬಂತೆ ತೋರಿಸಿ ಕೊಳ್ಳುತ್ತಾರೆ ಎನ್ನುವುದು ಹಿನಾ ಬಲೋಚ್ ಅವರ ವಾದವಾಗಿದೆ.

ನಮ್ಮ ಸಮುದಾಯ ಶೋಷಣೆಗೆ ಒಳಗಾಗಿದೆ

ಹಾಗೆಯೇ ಪಾಕಿಸ್ತಾನದಲ್ಲಿರುವ ಖವಾಜಾ ಸಿರಾ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ ಹಿನಾ ಬಲೋಚ್, ನಮ್ಮ ಸಮುದಾಯದವರ ಮೇಲೆ ಪಾಕಿಸ್ತಾನದಲ್ಲಿ ದಿನನಿತ್ಯ ಶೋಷಣೆಯಾಗುತ್ತಿದೆ. ನಮ್ಮವರು ಭಿಕ್ಷಾಟನೆ, ನೃತ್ಯ ಮಾಡುವುದು ಅಥವಾ ಲೈಂಗಿಕ ಕೆಲಸ (Sex Workers) ಗಳಲ್ಲಿ ತೊಡಗುವ ಮೂಲಕ ಜೀವನವನ್ನು ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net