8 ದಿನ, 22 ದಾಳಿ, 26 ಸಾವು: ನಮ್ಮ ಬಳಿ ಒಂದು ಲಕ್ಷ ನುರಿತ ಸೈನಿಕರಿದ್ದಾರೆ; ಪಾಕ್ ಸೈನ್ಯವನ್ನು ಸೋಲಿಸಲು ನಾವು ಸಿದ್ಧ: BLA ವಿಶ್ವಾಸ! BLA warns Pakistan Army
ಪಾಕಿಸ್ತಾನ ಸೈನ್ಯವನ್ನು ಎದುರಿಸಲು ನಾವು ಸಿದ್ದವಿದ್ದೆವೆ: ಬಲೂಚಿಸ್ತಾನ್ ಲಿಬರೇಷನ್ ಆರ್ಮಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ನಮ್ಮ ಬಳಿ ಗೆರಿಲ್ಲಾ ಯುದ್ಧ ಪರಿಣಿತ ಒಂದು ಲಕ್ಷ ಸೈನಿಕರಿದ್ದಾರೆ
ಕಳೆದ 8 ದಿನಗಳಲ್ಲಿ ನಡೆದ 22 ದಾಳಿಗಳಲ್ಲಿ 26 ಪಾಕ್ ಸೈನಿಕರನ್ನು ನಾವು ಬಲಿ ಪಡೆದಿದ್ದೆವೆ
ಪಾಕಿಸ್ತಾನ ಸೈನ್ಯವನ್ನು ಎದುರಿಸಲು ನಾವು ಸಿದ್ದವಿದ್ದೆವೆ: ಬಲೂಚಿಸ್ತಾನ್ ಲಿಬರೇಷನ್ ಆರ್ಮಿ
ಪಾಕ್ ಸೈನಿಕರು ನಮ್ಮ ನಾಗರಿಕರನ್ನು ಗುರಿ ಮಾಡಿಕೊಂಡು ದಾಳಿ ಮಾಡುತ್ತಿದ್ದಾರೆ
ಇಸ್ಲಾಮಾಬಾದ್: ದಿನ ಕಳೆದಂತೆ ಪಾಕಿಸ್ತಾನ ಹಾಗೂ ಬಲೂಚಿಸ್ತಾನ ನಡುವಿನ ಸಂಬಂಧ ಬಿಗಡಾಯಿಸುತ್ತಿದ್ದು, ಕಳೆದ ಎಂಟು ದಿನಗಳಲ್ಲಿ ಪಾಕ್ ಸೈನಿಕರು ನಮ್ಮ ಮೇಲೆ 22 ಬಾರಿ ದಾಳಿ ನಡೆಸಿದ್ದಾರೆ. ಇದರಲ್ಲಿ ಅವರ 26 ಸೈನಿಕರನ್ನು ನಾವು ಬಲಿ ಪಡೆದಿದ್ದೆವೆಂದು ಬಲೂಚ್ ನಾಯಕ (BLA warns Pakistan Army) ರು ಮಾಹಿತಿ ಹಂಚಿಕೊಂಡಿದ್ದಾರೆ.
ನಾವು ಆಗಸ್ಟ್ 11 ರಂದು ಪಾಕಿಸ್ತಾನದಿಂದ ಎಲ್ಲಾ ಸಂಬಂಧವನ್ನು ಕಳೆದುಕೊಂಡಿದ್ದು, ಸ್ವತಂತ್ರ ಬಲೂಚಿಸ್ತಾನವನ್ನು ಕಟ್ಟಿಕೊಂಡಿದ್ದೇವೆ. ನಮ್ಮ ಬಳಿ ಗೆರಿಲ್ಲಾ ಯುದ್ಧದಲ್ಲಿ ನಿಪುಣರಾದ ಒಂದು ಲಕ್ಷ ಸೈನಿಕರಿದ್ದು, ನಾವು ಪಾಕಿಸ್ತಾನಿ ಸೈನಿಕರನ್ನು ಸುಲಭವಾಗಿ ಸೋಲಿಸುತ್ತೇವೆಂದು ಹೇಳಿಕೊಂಡಿದ್ದಾರೆ.
ನಾವು ಪಾಕಿಸ್ತಾನವನ್ನು ಸೇರಿದ ದಿನದಿಂದ ಅವರು, ನಮ್ಮನ್ನು ಎರಡನೇ ದರ್ಜೆ ನಾಗರಿಕರಂತೆ ನೋಡಿದ್ದಾರೆ. ನಮಗೆ ಯಾವುದೇ ರಾಜಕೀಯ ಮತ್ತು ಉನ್ನತ ಅಧಿಕಾರದಲ್ಲಿ ಸ್ಥಾನವನ್ನು ನೀಡಿಲ್ಲ. ಹೀಗಾಗಿ ನಾವು ನಮ್ಮ ಸ್ವಂತ ದೇಶವನ್ನು ಕಟ್ಟಿಕೊಂಡಿದ್ದೇವೆ. ಆದರೆ ಪಾಕಿಸ್ತಾನದ ರೇಂಜರ್ಗಳು ನಮ್ಮ ನೆಲದ ನಾಗರಿಕರನ್ನು ಗುರಿ ಮಾಡಿಕೊಂಡು ಮಿಲಿಟರಿ ದಾಳಿ ನಡೆಸುತ್ತಿದ್ದಾರೆ.
ಅಷ್ಟೇ ಅಲ್ಲದೇ, ಬಲೂಚಿಸ್ತಾನಕ್ಕೆ ಮೂಲಭೂತ ಸೌಕರ್ಯಗಳನ್ನು ಹೊತ್ತುತರುವ ವಾಹನಗಳನ್ನು ಗಡಿಯಲ್ಲಿಯೇ ತಡೆಯಲಾಗುತ್ತಿದೆ. ಇದು ಅಂತಾರಾಷ್ಟ್ರೀಯ ಕಾನೂನು ಹಾಗೂ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಬಲೂಚಿಸ್ತಾನ್ ಲಿಬರೇಷನ್ ಆರ್ಮಿ (BLA) ಅರೋಪಿಸಿದೆ.
ನಮ್ಮಲ್ಲಿರುವ ರೈಲ್ವೆ, ಬಸ್ ನಿಲ್ದಾಣ ಹಾಗೂ ಸಾರ್ವಜನಿಕ ಸಾರಿಗೆಗಳ ಮೇಲೆ ಪಾಕ್ ಸೈನಿಕರು ಹೊಂಚುಹಾಕಿ ದಾಳಿ ನಡೆಸುತ್ತಿದ್ದಾರೆ. ಹಾಗೆಯೇ ನಾವು ಸಹ, ನಮ್ಮ ರಕ್ಷೆಣೆಗಾಗಿ ಅವರನ್ನು ಸದೆಬಡಿಯುತ್ತಿದೆವೆಂದು ಬಿಎಲ್ಎ ನಾಯಕರು ಹೇಳಿದ್ದಾರೆ, (ಏಜನ್ಸೀಸ್).