ದಿತ್ವಾ ಚಂಡಮಾರುತ ಅಬ್ಬರಕ್ಕೆ 46 ಜನರು ಬಲಿ, 23 ಮಂದಿ ನಾಪತ್ತೆ! | Cyclone Ditwah

 Cyclone Ditwah
Cyclone Ditwah
Published on
ಶ್ರೀಲಂಕಾ: ಶ್ರೀಲಂಕಾಕ್ಕೆ ಶುಕ್ರವಾರ ಅಪ್ಪಳಿಸಿದ ದಿತ್ವಾ(Cyclone Ditwah)ಪ್ರಬಲ ಚಂಡಮಾರುತ ಕನಿಷ್ಠ 46 ಜನರನ್ನು ಬಲಿ ತೆಗೆದುಕೊಂಡಿದ್ದು, 23 ಜನರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ 300 ಮಿಮೀ (11.8 ಇಂಚು) ಗಿಂತ ಹೆಚ್ಚಿನ ಮಳೆಯಾದ ಕಾರಣ ಉಂಟಾದ ಭೂಕುಸಿತದಿಂದಾಗಿ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ. ಮುಂದಿನ 12 ಗಂಟೆಗಳಲ್ಲಿ ದ್ವೀಪದಾದ್ಯಂತ ಚಂಡಮಾರುತವು ಮತ್ತಷ್ಟು ಬಲಗೊಳ್ಳಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಚಹಾ ಬೆಳಯುವ ಕೇಂದ್ರ ಜಿಲ್ಲೆಯಾದ ಬದುಲ್ಲಾದಲ್ಲಿ ರಾತ್ರಿಯಿಡೀ ಭೂಕುಸಿತ ಸೇರಿ ಮನೆಗಳ ಒಳಗೆ ನೀರು ನುಗ್ಗಿ 21 ಜನರು ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಅಲ್ಲದೆ, 43,991 ಜನರನ್ನು ಶಾಲೆಗಳು ಮತ್ತು ಸಾರ್ವಜನಿಕ ಆಶ್ರಯಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಡಿಎಂಸಿ ತಿಳಿಸಿದೆ.

ಪ್ರಧಾನಿ ಮೋದಿ ಸಂತಾಪ

ದಿತ್ವಾ ಚಂಡಮಾರುತದಿಂದಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಶ್ರೀಲಂಕಾದ ಜನರಿಗೆ ನನ್ನ ಸಂತಾಪಗಳು. ಎಲ್ಲಾ ಸಂತ್ರಸ್ತ ಕುಟುಂಬಗಳ ಸುರಕ್ಷತೆ, ಸಾಂತ್ವನ ಮತ್ತು ತ್ವರಿತ ಚೇತರಿಕೆಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಭಾರತವು ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಪರಿಹಾರ ಸಾಮಗ್ರಿಗಳು ಮತ್ತು ಪ್ರಮುಖ HADR ಬೆಂಬಲವನ್ನು ತುರ್ತಾಗಿ ರವಾನಿಸಿದೆ. ಪರಿಸ್ಥಿತಿ ವಿಕಸನಗೊಳ್ಳುತ್ತಿದ್ದಂತೆ ಹೆಚ್ಚಿನ ನೆರವು ಮತ್ತು ಸಹಾಯವನ್ನು ಒದಗಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net