ಮಧ್ಯಪ್ರಾಚ್ಯ ಯುದ್ಧದ ಕಪಿಮುಷ್ಠಿಯಲ್ಲಿ ಭಾರತೀಯ ಅಕ್ಕಿ: 4,00,000 ಟನ್ ಸರಕು ಬಂದರುಗಳಲ್ಲಿ ಲಾಕ್! Basmati stuck
Basmati stuck (ಸಾಂದರ್ಭಿಕ ಚಿತ್ರ)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿದ ಹಿನ್ನಲೆ, ಭಾರತದ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ
ಸುಮಾರು 4,00,000 ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿ ಇದೀಗ ವಿವಿಧ ಬಂದರುಗಳಲ್ಲಿ ಮತ್ತು ಸಾಗಣೆಯಲ್ಲಿ ಸಿಲುಕಿಕೊಂಡಿದೆ
ಭಾರತವು ವಿಶ್ವದ ಅತಿದೊಡ್ಡ ಆರೊಮ್ಯಾಟಿಕ್, ಪ್ರೀಮಿಯಂ ಬಾಸ್ಮತಿ ಅಕ್ಕಿ ರಫ್ತುದಾರ ರಾಷ್ಟ್ರವಾಗಿದೆ
ಹೆಚ್ಚುತ್ತಿರುವ ಕಂಟೇನರ್ ಸರಕು ಸಾಗಣೆ ವೆಚ್ಚದಿಂದ ಅಕ್ಕಿಯನ್ನು ಮಧ್ಯಪ್ರಾಚ್ಯಕ್ಕೆ ಸಾಗಿಸಲು ಸಾಧ್ಯವಾಗುತ್ತಿಲ್ಲ
ನವದೆಹಲಿ: ಇಸ್ರೇಲ್ ಮತ್ತು ಅಮೆರಿಕ ಇರಾನ್ ಮೇಲೆ ನಡೆಸಿದ ದಾಳಿ ನಂತರ ಉಂಟಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆಯು ಭಾರತದ ಬಾಸ್ಮತಿ ಅಕ್ಕಿ ರಫ್ತಿನ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಸುಮಾರು 4,00,000 ಮೆಟ್ರಿಕ್ ಟನ್ ಬಾಸ್ಮತಿ ಅಕ್ಕಿ (Basmati stuck) ಇದೀಗ ವಿವಿಧ ಬಂದರುಗಳಲ್ಲಿ ಮತ್ತು ಸಾಗಣೆಯಲ್ಲಿ ಸಿಲುಕಿಕೊಂಡಿದ್ದು, ರಫ್ತು ಒಪ್ಪಂದಗಳು ಸಂಪೂರ್ಣವಾಗಿ ಬತ್ತಿಹೋಗಿವೆ ಎಂದು ವ್ಯಾಪಾರ ಮೂಲಗಳು ಆತಂಕ ವ್ಯಕ್ತಪಡಿಸಿವೆ.
ಭಾರತವು ವಿಶ್ವದ ಅತಿದೊಡ್ಡ ಆರೊಮ್ಯಾಟಿಕ್, ಪ್ರೀಮಿಯಂ ಬಾಸ್ಮತಿ ಅಕ್ಕಿ ರಫ್ತುದಾರ ರಾಷ್ಟ್ರವಾಗಿದ್ದು, ಸೌದಿ ಅರೇಬಿಯಾ, ಇರಾನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸೇರಿದಂತೆ ಮಧ್ಯಪ್ರಾಚ್ಯದಲ್ಲಿ ಖರೀದಾರರು ಅದರ ಸಾಗಣೆಯ ಅರ್ಧಕ್ಕಿಂತ ಹೆಚ್ಚಿನದನ್ನು ಹೊಂದಿದ್ದಾರೆ.
ಈ ಕುರಿತು ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿರುವ ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ (AIREA) ಅಧ್ಯಕ್ಷ ಸತೀಶ್ ಗೋಯೆಲ್, ಸುಮಾರು 2,00,000 ಟನ್ ಬಾಸ್ಮತಿ ಅಕ್ಕಿ ಈಗಾಗಲೇ ಹಡಗುಗಳ ಮೂಲಕ ಸಾಗಣೆಯಾಗಿದ್ದು, ಅಷ್ಟೇ ಪ್ರಮಾಣದ ಅಕ್ಕಿ ಬಂದರುಗಳಲ್ಲಿ ರಫ್ತಾಗದೇ ಸಿಲುಕಿಕೊಂಡಿದೆ ಎಂದು ಹೇಳಿದರು.
ರಫ್ತುದಾರರು ಈಗಾಗಲೇ ದಾಸ್ತಾನುಗಳನ್ನು ಬಂದರುಗಳಿಗೆ ಸಾಗಿಸಿದ್ದಾರೆ. ಆದಾಗ್ಯೂ, ಹೆಚ್ಚುತ್ತಿರುವ ಕಂಟೇನರ್ ಸರಕು ಸಾಗಣೆ ವೆಚ್ಚದಿಂದ ಅಕ್ಕಿಯನ್ನು ಮಧ್ಯಪ್ರಾಚ್ಯಕ್ಕೆ ಸಾಗಿಸಲು ಸಾಧ್ಯವಾಗುತ್ತಿಲ್ಲ ಎಂದರು.
ಸೋಮವಾರ ಅಮೆರಿಕ ಮತ್ತು ಇಸ್ರೇಲಿ ಪಡೆಗಳು ಇರಾನ್ ಮೇಲೆ ವಾಯು ದಾಳಿ ನಡೆಸುವುದರೊಂದಿಗೆ ಆರಂಭವಾದ ಸಂಘರ್ಷವು ಈಗ ಲೆಬನಾನ್ ವರೆಗೂ ವಿಸ್ತರಿಸಿದೆ. ಇದಕ್ಕೆ ಪ್ರತಿಯಾಗಿ ಇರಾನ್, ಜಾಗತಿಕ ಇಂಧನ ಪೂರೈಕೆಯ ನಾಡಿಮಿಡಿತದಂತಿರುವ ಹಾರ್ಮುಜ್ ಜಲಸಂಧಿಯನ್ನು ಗುರಿಯಾಗಿಸಿಕೊಂಡಿರುವುದು ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದೆ. ಜಾಗತಿಕ ಸಾಗಣೆ ದರಗಳು ಹೆಚ್ಚಳವಾದ ಹಿನ್ನಲೆ, ವಿಮಾದಾರರು ತಮ್ಮ ಹಡಗುಗಳಿಗೆ ವಿಮಾ ರಕ್ಷಣೆಯನ್ನು ರದ್ದುಗೊಳಿಸುವುದರಿಂದ ಟ್ಯಾಂಕರ್‌ಗಳು ಮತ್ತು ಕಂಟೇನರ್ ಹಡಗುಗಳು ಸಹ ಜಲಮಾರ್ಗವನ್ನು ತಪ್ಪಿಸುತ್ತಿವೆ.
ಆದಾಗ್ಯೂ, ರಫ್ತುದಾರರು ಬಂದರುಗಳಲ್ಲಿ ಇರಿಸಲಾದ ಉತ್ಪನ್ನಗಳ ಶೇಖರಣಾ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ರಫ್ತುದಾರರ ಬಜೆಟನ್ನು ಮೀರಿಸುತ್ತಿದೆ. ಹಾಗಾಗಿ ಪರಿಸ್ಥಿತಿ ಕೈ ಮೀರೋಕು ಮುಂಚೆಯೇ ಸರ್ಕಾರ ಸಾರಿಗೆ ಸಬ್ಸಿಡಿ ಅಥವಾ ಶೇಖರಣಾ ಶುಲ್ಕದಲ್ಲಿ ವಿನಾಯಿತಿ ನೀಡಬೇಕು ಎಂದು ಸತೀಶ್ ಗೋಯೆಲ್ ಅಭಿಪ್ರಾಯ ಸೂಚಿಸಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಬಾಸ್ಮತಿ ಅಕ್ಕಿಗೆ ಭಾರೀ ಬೇಡಿಕೆಯಿದ್ದರೂ, ರಫ್ತುದಾರರು ಮಧ್ಯಪ್ರಾಚ್ಯದಿಂದ ಹೊಸ ಆರ್ಡರ್‌ಗಳನ್ನು ತೆಗೆದುಕೊಳ್ಳಿತ್ತಿಲ್ಲ. ಏಕೆಂದರೆ, ಈಗಾಗಲೇ ಮಾಡಿಕೊಂಡಿರುವ ಒಪ್ಪಂದಗಳನ್ನು ಪೂರೈಸುವುದು ಕಷ್ಟವಾಗಿರುವಾಗ, ಹೊಸ ಹೊಣೆಗಾರಿಕೆ ಬೇಡ ಎಂದು ನಿರ್ಧರಿಸಿದ್ದೇವೆ ಎಂದು ನವದೆಹಲಿ ಮೂಲದ ವ್ಯಾಪಾರ ಸಂಸ್ಥೆಯ ಡೀಲರ್ ಹೇಳಿದ್ದಾರೆ.
ದಾಖಲೆಯ ಸುಗ್ಗಿಯ ನಂತರ ಅಡಚಣೆ
ಯುದ್ಧವು ತನ್ನ ನಿಯಂತ್ರಣದಲ್ಲಿಲ್ಲದ ವಿಚಾರ ಎಂಬುದು ಖರೀದಿಗಾರರಿಗೂ ಮತ್ತು ಮಾರಾಟಗಾರರಿಗೂ ತಿಳಿದಿರುವುದರಿಂದ ಈ ವಿಳಂಬಕ್ಕೆ ಯಾರನ್ನೂ ದೂಷಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ವರ್ಷ ಭಾರತವು ದಾಖಲೆಯ ಬಾಸ್ಮತಿ ಬೆಳೆಯನ್ನು ಹೊಂದಿದ್ದು, ರಫ್ತು ಬೇಡಿಕೆಯಲ್ಲಿನ ಹಠಾತ್ ಕುಸಿತವು ಬೆಲೆಗಳಲ್ಲಿ ಅಂದಾಜು ಶೇ. 6 ರಷ್ಟು ಕಡಿಮೆ ಮಾಡಿದೆ.
ಬಿರಿಯಾನಿ, ಪಿಲಾಫ್‌ಗಳು ಮತ್ತು ಇತರ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬೆಳೆಯುವ ಏಕೈಕ ದೇಶವೆಂದರೆ, ಭಾರತ ಮತ್ತು ಪಾಕಿಸ್ತಾನ. ಇದು ಜಾಗತಿಕ ಮಟ್ಟಗಳಲ್ಲಿ ಬಾಸ್ಮತಿ ಅಕ್ಕಿಗೆ ಹೆಚ್ಚಿನ ಸ್ಥಾನವನ್ನು ಹೊಂದಿದೆ (ಏಜೆನ್ಸೀಸ್).