ಯುರೋಪ್‌ನಲ್ಲಿ 4 ಲಕ್ಷ ಕಿಟ್‌ಕ್ಯಾಟ್ ಚಾಕೊಲೇಟ್ ಲಪಟಾಯಿಸಿದ ಕಳ್ಳರು: ನೆಟ್ಟಿಗರ ಫನ್ನಿ ಮೀಮ್ಸ್‌ ವೈರಲ್..KitKat Bars Europe

KitKat Bars Europe
KitKat Bars Europe
Published on

ಪ್ರಮುಖ ಮುಖ್ಯಾಂಶಗಳು

  • ಇಟಲಿಯಿಂದ ಪೋಲೆಂಡ್‌ಗೆ ಸಾಗುತ್ತಿದ್ದ ಸುಮಾರು 12 ಟನ್ ತೂಕದ ಕಿಟ್‌ಕ್ಯಾಟ್ ಕಳವು
  • 4,13,793 ಕಿಟ್​ಕ್ಯಾಟ್​ ಬಾರ್​ಗಳನ್ನು ಎಗರಿಸಿದ ಕಳ್ಳರು
  • ಬ್ರೇಕ್​ ತಗೊಳ್ಳಿ ಎನ್ನುವ ಕಂಪನಿ ಟ್ಯಾಗ್‌ಲೈನ್ ಅನ್ನು ಕಳ್ಳರು ಸೀರಿಯಸ್ ಆಗಿ ತೆಗೆದುಕೊಂಡಿಬೇಕು ಎಂದ ಕಂಪನಿ
KitKat Bars Stolen:ಯೂರೋಪ್​​ನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಕಳ್ಳತನವಾದ ಸುದ್ದಿ ವೈರಲ್​ ಆಗಿದ್ದು, ಟ್ರೋಲ್​ ಮತ್ತು ಮೀಮ್ಸ್​ಗಳಿಗೆ ಕಾರಣವಾಗಿದೆ. ಇಡೀ ರಾಷ್ಟ್ರವೂ ಅಘಾತಕ್ಕೊಳಗಾಗಿದೆ ಏಕೆಂದರೆ, ಖದೀಮರು ಕದ್ದಿದ್ದು ಚಿನ್ನ ಅಥವಾ ವಜ್ರ, ವೈಢೂರ್ಯವಲ್ಲ ಅದರ ಬದಲಾಗಿ ಬರೋಬ್ಬರಿ 4.13 ಲಕ್ಷಕ್ಕೂ ಹೆಚ್ಚು ಕಿಟ್‌ಕ್ಯಾಟ್ ಚಾಕೊಲೇಟ್​ಗಳನ್ನು.
ಸ್ವಿಟ್ಜರ್ಲೆಂಡ್ ಮೂಲದ ಪ್ರಖ್ಯಾತ ಆಹಾರ ಸಂಸ್ಥೆ 'ನೆಸ್ಲೆ' ಸಂಸ್ಥೆಯು ಕಿಟ್​ಕ್ಯಾಟ್ ಬಾರ್​ಗಳನ್ನು ಇಟಲಿಯ ಉತ್ಪದನಾ ಕೇಂದ್ರದಿಂದ ಪೋಲೆಂಡ್‌ಗೆ ಸಾಗಿಸುತ್ತಿದ್ದ ಟ್ರಕ್​ ಒಂದನ್ನು ಖದೀಮರು ದೋಚಿದ್ದಾರೆ.
ಟ್ರಕ್‌ನಲ್ಲಿ ಸುಮಾರು 12 ಟನ್ ತೂಕದ ಕಿಟ್‌ಕ್ಯಾಟ್ ಚಾಕೊಲೇಟ್‌ಗಳಿದ್ದವು. ಇಷ್ಟು ದೊಡ್ಡ ಪ್ರಮಾಣದ ಚಾಕೊಲೇಟ್ ಒಮ್ಮೆಲೆ ನಾಪತ್ತೆಯಾಗಿರುವುದು ಕಂಪನಿಗೆ ದೊಡ್ಡ ತಲೆನೋವು ಉಂಟು ಮಾಡಿದೆ. ಈಸ್ಟರ್​ ಹಬ್ಬದ ಸಂದರ್ಭದಲ್ಲೇ ನಡೆದಿರುವ ಈ ಘಟನೆಯಿಂದಾಗಿ ಚಾಕೋಲೇಟ್ ಮಾರಾಟದಲ್ಲಿ ವ್ಯತ್ಯಯ ಉಂಟಾಗಬಹುದು ಎಂದು ಸಂಸ್ಥೆ ಪೇಚಿಗೆ ಸಿಲುಕಿದೆ.

ಕಂಪನಿ ಹೇಳಿದ್ದು ಹೀಗೆ

"ನಾವು ಯಾವಾಗಲೂ ಒಂದು ವಿರಾಮ ತೆಗೆದುಕೊಳ್ಳಿ ಎಂದು ನಮ್ಮ ಚಾಕೋಲೇಟ್ ಪ್ರಮೋಷನ್​ಗಳಲ್ಲಿ ಹೇಳುತ್ತೇವೆ ಮತ್ತು ಖರೀದಿ ಮಾಡಲು ಪ್ರೋತ್ಸಾಹಿಸುತ್ತೇವೆ. ಆದರೆ, ಈ ಕಿಡಿಗೇಡಿಗಳು ನಮ್ಮ ಸಂದೇಶವನ್ನು ಆಳವಾಗಿ ಸ್ವೀಕರಿಸಿ ಪಾಲಿಸಿದಂತಿದೆ. ಬ್ರೇಕ್​ ತೆಗೆದುಕೊಳ್ಳುವ ಬದಲು ನಮ್ಮ 12 ಟನ್​ ಚಾಕೋಲೇಟ್​ನೊಂದಿಗೆ ಬ್ರೇಕ್​ ಹಾಕಿ ಪರಾರಿಯಾಗಿದ್ದಾರೆ" ಎಂದು ಹಾಸ್ಯಮಯವಾಗಿ ಕಿಟ್‌ಕ್ಯಾಟ್ ವಕ್ತಾರರು ಮಾತನಾಡಿದ್ದಾರೆ.

ಕಳ್ಳರನ್ನು ಪತ್ತೆ ಹಚ್ಚೋದ್ಹೇಗೆ?

ಕಳ್ಳತನವಾದ ಚಾಕೊಲೇಟ್‌ಗಳು ಅನಧಿಕೃತವಾಗಿ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಚಾಕೊಲೇಟ್ ಪ್ಯಾಕ್ ಮೇಲೆ ಇರುವ 'ಬ್ಯಾಚ್ ಕೋಡ್' ಅನ್ನು ಸ್ಕ್ಯಾನ್ ಮಾಡುವ ಮೂಲಕ ಅದು ಕಳುವಾದ ಗುಂಪಿಗೆ ಸೇರಿದೆ ಎನ್ನುವುದನ್ನು ಗ್ರಾಹಕರು ಪತ್ತೆ ಹಚ್ಚಬಹುದು ಎಂದು ಎಂದು ನೆಸ್ಲೆ ಕಂಪನಿ ತಿಳಿಸಿದೆ.
ಮೀಮ್ಸ್​ಳ ಮಹಾಪೊರ
4.13 ಲಕ್ಷಕ್ಕೂ ಹೆಚ್ಚು ಕಿಟ್​​ ಕ್ಯಾಟ್​ ಕಾಣೆಯಾಗುತ್ತಲೇ ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​ಗಳು ಹರಿದಾಡುತ್ತಿದೆ. ಈಗ ಕಳ್ಳರು ಪ್ರಪಂಚದ ಅತಿ ಉದ್ದದ ಬ್ರೇಕ್ ತಗೋತಾರೆ ಎಂದು ಒಬ್ಬರು ಪೋಸ್ಟ್ ಮಾಡಿದ್ದರೆ, ಮತ್ತೊಬ್ಬರು "ಇಷ್ಟು ಚಾಕೊಲೇಟ್ ತಿಂದ ಮೇಲೆ ಅವರಿಗೆ ಹಲ್ಲು ನೋವು ಬರಲ್ವಾ?" ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಚಾಕೋಲೇಟ್​ ಕದ್ದ ಕಳ್ಳರು ನಾಲ್ಕೈದು ಕಿಟ್​ಕ್ಯಾಟ್​ ಜೊತೆಗಿಟ್ಟುಕೊಂಡು ಒಂದೇ ಸಲ ಲಬಕ್​ ಎಂದು ಬಾಯಿಗೆ ಹಾಕಿಕೊಂಡು ತಿನ್ನುತ್ತಿರಬಹುದಾ. ಅಷ್ಟನ್ನು ಹೇಗೆ ತಿನ್ನಲು ಸಾಧ್ಯ ಎಂದು ಹಾಸ್ಯಮಾಡಿದ್ದಾರೆ. ಮತ್ತೊಬ್ಬರು ಖದೀಮ ಕಿಟ್​ಕ್ಯಾಟ್​ನ್ನೇ ಹಾಸಿಗೆ ಮಾಡಿಕೊಂಡಿರಬಹುದು ಎಂದು ಹೇಳಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net