ವಾಷಿಂಗ್ಟನ್: ಹುಟ್ಟಿದ ತಕ್ಷಣ ಆಸ್ಪತ್ರೆ ಸಿಬ್ಬಂದಿ ಮಾಡಿದ ಒಂದು ಸಣ್ಣ ನಿರ್ಲಕ್ಷ್ಯ, ಇಬ್ಬರು ವ್ಯಕ್ತಿಗಳ ಇಡೀ ಜೀವನದ ಹಾದಿಯನ್ನೇ ಬದಲಾಯಿಸಿಹಾಕಿದೆ. ನಾರ್ತ್ ಡಕೋಟಾದಲ್ಲಿ ಭಿನ್ನ ಕುಟುಂಬಗಳಲ್ಲಿ ಬೆಳೆದ ಇಬ್ಬರು ಯುವಕರು, ತಾವಿಬ್ಬರೂ ಜನಿಸಿದ ಆಸ್ಪತ್ರೆಯಲ್ಲೇ (Swapped At Birth) ಅದಲು-ಬದಲು ಆಗಿದ್ದರು ಎಂಬ ಆಘಾತಕಾರಿ ಸತ್ಯ ಬರೋಬ್ಬರಿ 36 ವರ್ಷಗಳ ಬಳಿಕ ಬೆಳಕಿಗೆ ಬಂದಿದ್ದು, ಇದೀಗ ಎರಡೂ ಕುಟುಂಬಗಳು ಒಗ್ಗೂಡಿ ಸ್ಥಳೀಯ ಆಸ್ಪತ್ರೆಯ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿವೆ.