ಕ್ರಿಯೇಟಿವ್​ ಮೈಂಡ್​ ಇದ್ರೆ ಸಾಕು... ಈ ಯುವಕನ ರೀತಿ ದಿನಕ್ಕೆ 3 ಗಂಟೆ ಕೆಲ್ಸ ಮಾಡಿ ತಿಂಗಳಿಗೆ 16 ಲಕ್ಷ ದುಡಿಯಬಹುದು! Kaylan McDonald

ಕೈಲಾನ್ ಮ್ಯಾಕ್​ಡೊನಾಲ್ಡ್
ಕೈಲಾನ್ ಮ್ಯಾಕ್​ಡೊನಾಲ್ಡ್
Published on

ಪ್ರಮುಖ ಮುಖ್ಯಾಂಶಗಳು

  • ಯುಗದಲ್ಲಿ ಹಣ ಸಂಪಾದಿಸಲು ಹಲವಾರು ಮಾರ್ಗಗಳಿವೆ
  • ಇಂದಿನ ಯುವ ಪೀಳಿಗೆಯು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕಂಟೆಂಟ್​ ಕ್ರಿಯೆಟ್ ಹಣ ಗಳಿಸುತ್ತಿದೆ
  • ಹೆಚ್ಚಿನವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕೆಲಸಗಳನ್ನು ಮಾಡಿಯು ಹಣ ಸಂಪಾದಿಸುತ್ತಾರೆ
Kaylan McDonald : ಡಿಜಿಟಲ್ ಯುಗದಲ್ಲಿ ಹಣ ಸಂಪಾದಿಸಲು ಹಲವಾರು ಮಾರ್ಗಗಳಿವೆ. ಇಂದಿನ ಯುವ ಪೀಳಿಗೆಯು ಡಿಜಿಟಲ್ ಮಾರ್ಕೆಟಿಂಗ್ ಮತ್ತು ಕಂಟೆಂಟ್​ ಕ್ರಿಯೆಟ್​ ಮೂಲಕ ಹೆಚ್ಚಿನ ಹಣವನ್ನು ಗಳಿಸುತ್ತಿದೆ. ಹೆಚ್ಚಿನವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕೆಲಸಗಳನ್ನು ಮಾಡಿಯು ಹಣ ಸಂಪಾದಿಸುತ್ತಾರೆ. ಇದೇ ರೀತಿ ಹಣ ಸಂಪಾದಿಸುತ್ತಿರುವ 18 ವರ್ಷದ ಯುವಕ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದಾನೆ. ಆ ಯುವಕನೇ ಕೈಲಾನ್ ಮ್ಯಾಕ್​ಡೊನಾಲ್ಡ್.
ಕೈಲಾನ್​ ಮ್ಯಾಕ್​ಡೊನಾಲ್ಡ್​ ಬ್ರಿಟನ್​ ಮೂಲದವನು. ಈತ ಆನ್‌ಲೈನ್‌ನಲ್ಲಿ ಸ್ಟಿಕ್ಕರ್‌ಗಳನ್ನು ಮಾರಾಟ ಮಾಡುವ ಮೂಲಕ ತಿಂಗಳಿಗೆ 19,000 ಡಾಲರ್​ (ಸುಮಾರು 16 ಲಕ್ಷ ರೂ.) ಗಳಿಸುತ್ತಿದ್ದಾನೆ. ಕ್ರಿಸ್‌ಮಸ್ ಉಡುಗೊರೆಯಾಗಿ ತನ್ನ ತಾಯಿ ನೀಡಿದ ಕ್ರಾಫ್ಟ್ ಕಿಟ್ ಅನ್ನು ಬಳಸಿಕೊಂಡು ಕೈಲಾನ್, ತನ್ನ ಸ್ಟಿಕ್ಕರ್ ವ್ಯವಹಾರವನ್ನು ಪ್ರಾರಂಭಿಸಿದನು.
ಕೈಲಾನ್​ ಅವರ ತಾಯಿ ಕರೆನ್ ನ್ಯೂಶ್ಯಾಮ್ ಅವರು ಮೂರು ವರ್ಷಗಳ ಹಿಂದೆ 190.37 ಡಾಲರ್​ (ಸುಮಾರು ರೂ. 16,000) ಮೌಲ್ಯದ ಡಿಜಿಟಲ್ ಡ್ರಾಯಿಂಗ್ ಮತ್ತು ಪ್ರಿಂಟಿಂಗ್ ಯಂತ್ರವಾದ ಕ್ರಿಕಟ್ ಜಾಯ್ ಅನ್ನು ಉಡುಗೊರೆಯಾಗಿ ನೀಡಿದರು. ಇದನ್ನು ಬಳಸಿಕೊಂಡು ಕೈಲಾನ್​ ವಿವಿಧ ರೀತಿಯ ಸ್ಟಿಕ್ಕರ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು.
ತಾನು ತಯಾರಿಸಿದ ಸ್ಟಿಕ್ಕರ್‌ಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲು ಪ್ರಾರಂಭಿಸಿದನು. ಬಳಿಕ ಸ್ಟಿಕ್ಕರ್‌ಗಳಿಗೆ ಬೇಡಿಕೆ ಹೆಚ್ಚಾಯಿತು. ಇದರಿಂದ ಹಣ ಸಂಪಾದಿಸಲು ಆರಂಭಿಸಿದನು. 2024ರ ಆರಂಭದ ವೇಳೆಗೆ, ಕೈಲಾನ್​ ಸುಮಾರು 200 ಆರ್ಡರ್​ಗಳನ್ನು ಪಡೆದನು. ಶಾಲೆಯನ್ನು ಮುಗಿಸಿ ಬಂದು ಪ್ರತಿದಿನ ಮೂರು ಗಂಟೆಗಳ ಕಾಲ ಸ್ಟಿಕ್ಕರ್‌ಗಳನ್ನು ತಯಾರಿಸುತ್ತಿದ್ದನು.
ಅಲ್ಲದೆ, ವಿದ್ಯಾಭ್ಯಾಸ ಮುಗಿಸಿ ದೊಡ್ಡ ದೊಡ್ಡ ಪ್ರಿಂಟರ್​ಗಳನ್ನು ಖರೀದಿಸಿ ವ್ಯಾಪಾರದಲ್ಲಿ ಸುಧಾರಣೆ ತರತೊಡಗಿದನು. ಇದೀಗ ಟಿಕ್‌ಟಾಕ್ ಶಾಪ್ ಮತ್ತು ಇತರ ವೆಬ್‌ಸೈಟ್‌ಗಳ ಮೂಲಕ ಸ್ಟಿಕ್ಕರ್‌ಗಳನ್ನು ಮಾರಾಟ ಮಾಡುವ ಮೂಲಕ, ಮೇ ತಿಂಗಳಲ್ಲಿ ಕೈಲಾನ್, 94,410.31 ಡಾಲರ್ ( 79,98,563 ರೂಪಾಯಿ ) ಗಳಿಸಿದ್ದಾನೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net