ಇರಾನ್ನ ಪ್ರಮುಖ 8 ಕಣ್ಣಿನ ಆಸ್ಪತ್ರೆಗಳು ಮತ್ತು 16 ತುರ್ತು ವಿಭಾಗಗಳ ಸಿಬ್ಬಂದಿ ಸಂಗ್ರಹಿಸಿದ ಮಾಹಿತಿ ಪ್ರಕಾರ ಮಕ್ಕಳು, ಗರ್ಭಿಣಿಯರು, ಮಹಿಳೆಯರು ಸೇರಿದಂತೆ ಕನಿಷ್ಠ 16,500 ರಿಂದ 18,000 ಜನರು ಮೃತಪಟ್ಟಿದ್ದು, 3,30,000 ದಿಂದ 3,60,000 ಜನರು ಗಾಯಗೊಂಡಿದ್ದಾರೆ. ಕನಿಷ್ಠ 700 ರಿಂದ 1000 ಜನರು ಕಣ್ಣು ಕಳೆದುಕೊಂಡಿದ್ದಾರೆ ಮತ್ತು 7000 ಜನರ ಕಣ್ಣುಗಳಿಗೆ ಗಾಯಗಳಾಗಿವೆ. ಸಾಕಷ್ಟು ಜನರು ರಕ್ತದ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ, ಕೆಲವು ಸಂದರ್ಭಗಳಲ್ಲಿ ಭದ್ರತಾ ಪಡೆಗಳು ರೋಗಿಗಳಿಗೆ ರಕ್ತ ನೀಡಲೂ ಅನುಮತಿ ನೀಡಲಿಲ್ಲ ಎಂದು ದಿ ಸಂಡೇ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.