ವಿಯೆಟ್ನಾಂನಲ್ಲಿ ದೋಣಿ ಮಗುಚಿ ಮಹಾ ದುರಂತ! ಕನಿಷ್ಠ 15 ಭಾರತೀಯ ಪ್ರವಾಸಿಗರು ದುರ್ಮರಣ

ಸ್ಪೀಡ್​ ಬೋಟ್​ ಮಗುಚಿದ ದೃಶ್ಯ
ಸ್ಪೀಡ್​ ಬೋಟ್​ ಮಗುಚಿದ ದೃಶ್ಯ
Published on

ಪ್ರಮುಖ ಮುಖ್ಯಾಂಶಗಳು

  • ವಿಯೆಟ್ನಾಂನ ಪ್ರಸಿದ್ಧ ಪ್ರವಾಸಿ ತಾಣವಾದ ಫೂ ಕ್ವೋಕ್ ದ್ವೀಪದಲ್ಲಿ ದುರಂತ
  • ಸ್ಪೀಡ್‌ಬೋಟ್ ಮಗುಚಿ ಬಿದ್ದ ಪರಿಣಾಮ ಕನಿಷ್ಠ 15 ಭಾರತೀಯ ಪ್ರವಾಸಿಗರು ದುರ್ಮರಣ
ಹನೋಯಿ: ವಿಯೆಟ್ನಾಂನ ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಫೂ ಕ್ವೋಕ್ ದ್ವೀಪದ ಬಳಿ ಪ್ರವಾಸಿಗರಿದ್ದ ಸ್ಪೀಡ್‌ಬೋಟ್ ಮಗುಚಿ ಬಿದ್ದ ಪರಿಣಾಮ ಕನಿಷ್ಠ 15 ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. 
ದೋಣಿಯಲ್ಲಿ ಒಟ್ಟು 32 ಭಾರತೀಯ ಪ್ರವಾಸಿಗರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ನಾಲ್ಕು ಮಂದಿ ವಿಯೆಟ್ನಾಂ  ಸಿಬ್ಬಂದಿ ಇದ್ದರು. ದುರಂತದಲ್ಲಿ ಒಟ್ಟು 15 ಜೀವ ಕಳೆದುಕೊಂಡಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿದ ಬೋಟ್

'ವಿಎನ್ ಎಕ್ಸ್‌ಪ್ರೆಸ್' ವರದಿಯ ಪ್ರಕಾರ, ಈ ಸ್ಪೀಡ್‌ಬೋಟ್ 'ಹಾನ್ ಮೇ ರುತ್' ದ್ವೀಪದಿಂದ 'ಅನ್ ಥೋಯ್' ಬಂದರಿನ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ, ಮಾರ್ಗ ಮಧ್ಯೆ ತೀರದಿಂದ ಕೇವಲ 400 ಮೀಟರ್ ದೂರದಲ್ಲಿದ್ದಾಗ ನಿಯಂತ್ರಣ ತಪ್ಪಿ ಮಗುಚಿದೆ. ದುರಂತದ ಸಮಯದಲ್ಲಿ ಸಮುದ್ರದ ಅಲೆಗಳ ಅಬ್ಬರ ಹಾಗೂ ಹವಾಮಾನ ವೈಪರೀತ್ಯಗಳಿತ್ತು ಎಂದು ವರದಿಯಾಗಿದೆ. 

ರಕ್ಷಣಾ ಕಾರ್ಯಾಚರಣೆ ಚುರುಕು 

ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ದಾರುಣ ಘಟನೆಯನ್ನು ಖಚಿತಪಡಿಸಿದ್ದು, "ಫೂ ಕ್ವೋಕ್ ದ್ವೀಪದ ಬಳಿ ಭಾರತೀಯ ಪ್ರವಾಸಿಗರಿದ್ದ ಬೋಟ್ ಮುಳುಗಡೆ ಅತ್ಯಂತ ದುರದೃಷ್ಟಕರ" ಎಂದು ಅಧಿಕೃತ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದೆ. ಸ್ಥಳೀಯ ಅಧಿಕಾರಿಗಳ ಸಹಾಯದಿಂದ ಸಮುದ್ರದಲ್ಲಿ ರಕ್ಷಣಾ ಪಡೆಗಳು ಶೋಧ ಕಾರ್ಯ ಮುಂದುವರಿಸಿದ್ದು, ದುರಂತದ ಸಂಪೂರ್ಣ ಮಾಹಿತಿಯನ್ನು ಕಲೆಹಾಕುತ್ತಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net