ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಇಂದು

Published on

ಸೋಮವಾರಪೇಟೆ: ಜೇಸಿಐ ಪುಷ್ಪಗಿರಿ ಮಹಿಳಾ ಜೇಸಿ ವಿಂಗ್ ವತಿಯಿಂದ ಮಾ.22ರಂದು ಮಧ್ಯಾಹ್ನ 2.30ಕ್ಕೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳಾ ಸಮಾಜದಲ್ಲಿ ನಡೆಯಲಿದೆ.

ಜೇಸಿ ವಲಯ ನಿರ್ದೇಶಕಿ ಮಾಯಾ ಗಿರೀಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಹಿಳಾ ಜೇಸಿ ವಿಂಗ್ ಅಧ್ಯಕ್ಷೆ ಜ್ಯೊತಿ ರಾಜೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶನಿವಾರಸಂತೆಯ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸುಜಲಾ ದೇವಿ, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಹಾಗೂ ಜೆಸಿಐ ಅಧ್ಯಕ್ಷೆ ಜಗದಾಂಬಾ ಗುರುಪ್ರಸಾದ್ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಚಿಕ್ಕತೋಳೂರು ಗ್ರಾಮದ ಶಕುಂತತಾ, ಕೃಷಿಯಲ್ಲಿ ಸಾಧನೆಗೈದ ಗೌಡಳ್ಳಿಯ ಜಿ.ಕೆ. ಲತಾ, ಆರೋಗ್ಯ ಸೇವೆಯಲ್ಲಿ ಸೇವೆ ಮಾಡುತ್ತಿರುವ ವಸಂತಿ, ಶಿಕ್ಷಣ ಕ್ಷೇತ್ರದಲ್ಲಿ ಎಂ.ಐ.ರಿಜ್ವಾನ ಬಾನು ಹಾಗೂ ಜೇಸಿ ಖೇಲ್‌ರತ್ನ ಪುರಸ್ಕೃತ ತಾನಿಯಾ ಅವರನ್ನು ಸನ್ಮಾನಿಸಲಾಗುವುದು ಎಂದು ಕಾರ್ಯದರ್ಶಿ ವಿನುತಾ ಸುದೀಪ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net