

ಶಿವಮೊಗ್ಗ: ಬಾಪೂಜಿನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜು.19ಕ್ಕೆ ಕಾಲೇಜು ಶಿಕ್ಷಣ ಇಲಾಖೆ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಾಗತಿಕ ಸುಸ್ಥಿರ ಮತ್ತು ಸಮಾವೇಶಾತ್ಮಕ ಅಭಿವೃದ್ಧಿಗಾಗಿ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ವೇದಿಕೆಗಳ ಶಕ್ತಿ ಉಪಯೋಗ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಪ್ರೊ. ಬಿ.ಜಿ.ಚನ್ನಪ್ಪ ಹೇಳಿದರು.
ಈಗಾಗಲೇ 160 ಪ್ರಬಂಧ ಬಂದಿದ್ದು, ನಾಲ್ಕು ಕೊಠಡಿಗಳಲ್ಲಿ ಆಫ್‌ಲೈನ್ ಹಾಗೂ ಆನ್‌ಲೈನ್‌ನಲ್ಲಿ ಪ್ರಬಂಧ ಮಂಡನೆಯಾಗಲಿವೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಕೇವಲ ಸಾಧನಗಳಲ್ಲ. ಅವು ಮಾನವೀಯ ಮೌಲ್ಯಗಳನ್ನು ಒಳಗೊಂಡು ಎಲ್ಲರಿಗೂ ಸಮಾನ ಅವಕಾಶಗಳನ್ನು ನೀಡುವ ಸಮಾಜವನ್ನು ರೂಪಿಸುವ ಶಕ್ತಿ ಹೊಂದಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೆಳಗ್ಗೆ 10ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿಚಾರ ಸಂಕಿರಣ ಉದ್ಘಾಟಿಸುವರು. ಶಾಸಕ ಎಸ್.ಎನ್.ಚನ್ನಬಸಪ್ಪ, ಎಂಎಲ್‌ಸಿಗಳಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಬಲ್ಕಿಷ್ ಬಾನು, ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತೆ ಎನ್.ಮಂಜುಶ್ರೀ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಎಚ್.ಕೇಶವ, ಪ್ರೊ. ಎಸ್.ವೆಂಕಟೇಶ್ ಭಾಗವಹಿಸುವರು ಎಂದರು.
ಸಹಪ್ರಾಧ್ಯಾಪಕ ಡಾ. ಎಸ್.ಸಂತೋಷ್‌ಕುಮಾರ್, ಡಾ. ಗೌಸಿಯ ಕಾಟೂಂ, ಬೆಂಗಳೂರಿನ ಡಾ. ಮಹಮ್ಮದ್ ಫಾರೂಖ್ ಪಾಶ ಆಶಯ ಭಾಷಣ ಮಾಡುವರು. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭದಲ್ಲಿ ಕುವೆಂಪು ವಿವಿ ಮ್ಯಾನೇಜ್‌ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥ ಪ್ರೊ. ಹಿರೇಮಣಿನಾಯ್ಕ ಪಾಲ್ಗೊಳ್ಳುವರು ಎಂದರು.
ಡಾ. ಎಸ್.ಎಚ್.ಪ್ರಸನ್ನ, ಪ್ರೊ. ಶಶಿಧರ್, ಪ್ರೊ. ಜಯಕೀರ್ತಿ, ಡಾ. ಎಚ್.ಅಶ್ವಿನಿ, ಡಾ. ವಿ.ಡಿ.ಕೃಪಾ ಸುದ್ದಿಗೋಷ್ಠಿಯ್ಲಲ್ಲಿದ್ದರು.