

ಕೆ.ಆರ್.ನಗರ: ಅಖಿಲ ಭಾರತ ಕಾಂಗ್ರೆಸ್ ಸಾಮಾಜಿಕ ಸಂಘಟನೆ ವತಿಯಿಂದ ಸಮಾಜ ಸೇವಕ ಸಿ.ಎಲ್.ರವೀಶ್ ಅವರಿಗೆ 2023ನೇ ಸಾಲಿನ ಮಹಾತ್ಮಗಾಂಧಿ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದೆಹಲಿಯ ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪಟ್ಟಣದ ಕ್ರಿಶ್ಚಿಯನ್ ಸಮಾಜದ ಮುಖಂಡ ಸಿ.ಎಲ್.ರವೀಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಸಮಾಜ ಸೇವೆ ಗುರುತಿಸಿ ಶಾಂತಿ ಪ್ರಶಸ್ತಿ ದೊರಕಿದೆ.
ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಮೊಹಮ್ಮದ್ ರಿಯಾಜ್, ಸುಪ್ರೀಂಕೋರ್ಟ್‌ನ ವಕೀಲರಾದ ಡಾ.ಇಸ್ರತ್ ಜಮೀಲ್, ಮೆಹಮೂದ್ ಪರಾಚಾ ಶಾಂತಿ ಪ್ರಶಸ್ತಿ ಪ್ರದಾನ ಮಾಡಿದರು.