

ಬೆಂಗಳೂರು: ಅಶ್ವಿನಿ ಅಂಗಡಿ ಟ್ರಸ್ಟ್ ಮತ್ತು ಭಾರತೀಯ ಅಂಧರ ಪುಟ ಬಾಲ್ ಸಂಸ್ಥೆ ಸಹಯೋಗದಲ್ಲಿ ಜನವರಿ 23ರಿಂದ 26ರವರಗೆ ಅಂತರಾಷ್ಟ್ರೀಯ ಅಂಧರ ಪುರುಷರ ಮತ್ತು ಮಹಿಳೆಯರ ಪುಟ್‌ಬಾಲ್ ಸೂಪರ್ ಲೀಗ್ ಪಂದ್ಯಾವಳಿಯನ್ನು ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.
ಅಂಗನ್ಯೂನ್ಯತೆ ಮತ್ತು ಪ್ರಪಂಚದ ಬೆಳಕನ್ನೆ ನೋಡದೇ ಛಲದಿಂದ ಬದುಕು ಕಟ್ಟಿಕೊಂಡು ಸಾಮಾನ್ಯರಂತೆ ಬದುಕುವ ಛಲ ಹೊಂದಿರುವ ನಾವು ಸಾಧಿಸಿ ತೋರಿಸಬಲ್ಲೆವು ಎಂಬ ಸಂದೇಶದೊಂದಿಗೆ ನಗರದ ಬಿ.ಇ.ಎಲ್ ರಸ್ತೆಯಲ್ಲಿರುವ ಮ್ಯಾಚ್ ಡೈ ಗ್ರೌಂಡ್‌ನಲ್ಲಿ ಪುಟ್‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಅಶ್ವಿನಿ ಅಂಗಡಿ ಟ್ರಸ್ಟ್ ಸಂಸ್ಥಾಪಕಿ ಅಶ್ವಿನಿ ಅಂಗಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜನವರಿ 23ರಿಂದ 26ರವರೆಗೆ ಪುರುಷರ ಮತ್ತು ಮಹಿಳೆಯರ ಪುಟ್ ಬಾಲ್ ಸೂಪರ್ ಲೀಗ್ ಪಂದ್ಯಾವಳಿ ಜರುಗಲಿದೆ ಮತ್ತು ಮೆಕ್ಸಿಕೊ ಮತ್ತು ಸೌತ್ ಕೊರಿಯ ಪ್ಯಾರ ಓಲಿಂಪಿಕ್ ಚಿನ್ನದ ಪದಕ ವಿಜೇತರು ಪುಟ್ ಬಾಲ್ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಬೆಳಗ್ಗೆ 9ಗಂಟೆಗೆ ಕನ್ನಡ, ಸಂಸ್ಕೃತ ವಿಶ್ವವಿದ್ಯಾಲಯದ ಕುಲಸಚಿವ ವಿಶ್ವನಾಥ್ ಹಿರೇಮಠ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.ಕೆ.ಎಸ್.ಡಿ.ಎಲ್.ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ,ಪೊಲೀಸ್ ಅಧಿಕಾರಿ ಸಿ.ಕೆ.ಬಾವ , ಎನ್.ಹೆಚ್.ಪಿ.ಸಿ.ಜನರಲ್ ಮ್ಯಾನೇಜರ್ ಗಳಾದ ಬಿ.ಡಿ.ಮಹಾರಾಣ, ರಾಜಪ್ಪನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಜನವರಿ 26ರಂದು ಸಮಾರೋಪ ಮತ್ತು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಉಪಮುಖ್ಯಮಂತ್ರಿ ಡಾ॥ ನಾರಾಯಣ್ ,
ವಿಧಾನಪರಿಷತ್ ಸದಸ್ಯ ವೈ.ಎಂ.ಸತೀಶ್ ರೆಡ್ಡಿ, ಹಸಿರು ಫಾರ್ಮ್ ಸಿ.ಇ.ಓ. ಅಕ್ಷಾರ್ ಎಂ.ಎಸ್, ದೀಪಕ್ ಶಾ, ಜಿ.ಐ.ಸಿ.ಸಂಸ್ಥೆಯ ಮುಖ್ಯಸ್ಥ ದೀಪಕ್ ಶಾ ಮತ್ತು ಅದಾನಿ ಗ್ರೂಪ್ ಜಯರಾಮನ್ ಪುನಿಧನ್ ಪಾಲ್ಗೋಳ್ಳಲಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಸಮಾಜ ಸೇವಕ ಅಮೃತ್ ಲಾಲ್ ಶಾ ಮತ್ತು ಮ್ಯಾಚ್ ಡೇ ಕ್ರೀಡಾಂಗಣದ ಮಾಲೀಕ ಸ್ವಾತಿಕ್ ಸನ್ಮಾನಿಸಲಾಗುವುದು ಎಂದರು. ಭಾರತೀಯ ಅಂಧರ ಪುಟಬಾಲ್ ಸಂಸ್ಥೆಯ ಅಧ್ಯಕ್ಷ ನಿಡೋ ಟಾಮ್, ಅಂತರಾಷ್ಟೀಯ ಪುಟ್ ಬಾಲ್ ಕ್ರೀಡಾಪಟುಗಳು, ರೆಫ್ರರಿಗಳು ಉಪಸ್ಥಿತರಿದ್ದರು.