ಇಲ್ಲಿದೆ ನೋಡಿ ಮಹಿಳೆಯರ ಕುರಿತ ಆಸಕ್ತಿಕರ ಸಂಗತಿಗಳು! ಸ್ವತಃ ನಾರಿಯರಿಗೂ ಇದು ತಿಳಿದಿಲ್ಲ...Women

Women
Published on

Women : ಈ ಸೃಷ್ಟಿಯಲ್ಲಿ ಒಬ್ಬ ಮಹಿಳೆಗೆ ಮಾತ್ರ ಮನುಷ್ಯನಿಗೆ ಜೀವ ನೀಡಿ ಈ ಭೂಮಿಗೆ ತರುವ ಶಕ್ತಿ ಇದೆ. ಮಹಿಳೆಯರನ್ನು ಈ ಸೃಷ್ಟಿಯ ಅನೇಕ ಸುಂದರವಾದ ವಸ್ತುಗಳಿಗೆ ಹೋಲಿಸಲಾಗುತ್ತದೆ. ಭೂಮಿಯನ್ನು ಭೂತಾಯಿ ಅಂತಾನೇ ಕರೆಯಲಾಗುತ್ತದೆ. ಪ್ರಕೃತಿಯನ್ನು ಸಹ ಹಣ್ಣಿನ ಹೆಸರಲ್ಲೇ ಪೂಜಿಸಲಾಗುತ್ತದೆ. ಅಷ್ಟೇ ಯಾಕೆ ನಮ್ಮ ಭಾರತವನ್ನು ಕೂಡ ಭಾರತ ಮಾತೆ ಎಂದೇ ಕರೆಯುತ್ತಾರೆ.

ಇಡೀ ಜಗತ್ತಿನಲ್ಲಿ ಹೆಣ್ಣಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಅಲ್ಲದೆ, ಮಹಿಳೆಯರಿಗಾಗಿಯೇ ಮಾರ್ಚ್​ 8ರಂದು ವಿಶ್ವ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಇಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿರುವ ಮಹಿಳೆಯರ ಬಗ್ಗೆ ಅವರಿಗೆ ಗೊತ್ತಿಲ್ಲದಿರುವ ಕೆಲವು ಸಂಗತಿಗಳನ್ನು ನಾವು ನಿಮಗೆ ಹೇಳಲಿದ್ದೇವೆ. ಅವುಗಳನ್ನು ತಿಳಿದುಕೊಳ್ಳಲು ನೀವು ಸಿದ್ಧರಿದ್ದೀರಾ?

ಮಹಿಳೆಯರಲ್ಲಿ ಬೆವರುವಿಕೆ ಕಡಿಮೆ

ಪುರುಷರ ದೇಹವು ಶೇ. 65% ನೀರಿನಿಂದ ಕೂಡಿದ್ದರೆ, ಮಹಿಳೆಯರ ದೇಹವು ಕೇವಲ 55% ರಷ್ಟು ಮಾತ್ರ ನೀರಿನಿಂದ ಕೂಡಿದೆ. ರಕ್ತ, ಮೂತ್ರ, ಪಾದಗಳು, ಬೆನ್ನುಹುರಿ, ಲಾಲಾರಸದವರೆಗೆ ಎಲ್ಲವನ್ನೂ ನಿಯಂತ್ರಿಸುವ ಜವಾಬ್ದಾರಿ ನೀರಿನ ಮೇಲಿದೆ. ಹಾಗಾಗಿ ಅಂಗಾಂಶಗಳಲ್ಲಿ ಕಡಿಮೆ ನೀರು ಇರುವುದರಿಂದ ಅವರು ಪುರುಷರಿಗಿಂತ ಕಡಿಮೆ ಬೆವರುತ್ತಾರೆ.

ಮಹಿಳೆಯರು ಸರಾಸರಿ 1.8 ಕೆಜಿ ಲಿಪ್​ಸ್ಟಿಕ್​ ಸೇವಿಸುತ್ತಾರೆ

ಲಿಪ್​ಸ್ಟಿಕ್​ ತಿನ್ನುವುದು ಎಂದರೆ ಅದನ್ನು ನೇರವಾಗಿ ಬಾಯಿಗೆ ಇಟ್ಟು ಅಗಿಯುವುದು ಎಂದಲ್ಲ. ಲಿಪ್​ಸ್ಟಿಕ್​ ಚರ್ಮದ ಮೂಲಕ ಹೀರಲ್ಪಡುತ್ತದೆ. ಅಂದರೆ, ಲಿಪ್​ಸ್ಟಿಕ್​ ಹಚ್ಚಿದ ಕೆಲವೇ ಗಂಟೆಗಳಲ್ಲಿ ಅದು ಸವೆದುಹೋಗುತ್ತದೆ. ಇದರರ್ಥ ಅದು ನಿಮ್ಮ ದೇಹವನ್ನು ಪ್ರವೇಶಿಸಿದೆ ಎಂದರ್ಥ. ಹೀಗಾಗಿ ಮಹಿಳೆಯುರು ತಮ್ಮ ಜೀವಿತಾವಧಿಯಲ್ಲಿ ಸರಾಸರಿ 1.8 ಕೆಜಿ ಲಿಪ್​ಸ್ಟಿಕ್​ ಅನ್ನು ಸೇವಿಸುತ್ತಾರೆ.

ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು

ಸ್ತ್ರೀ ದೇಹದ ಹಾರ್ಮೋನ್ ಈಸ್ಟ್ರೋಜೆನ್ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ಮಹಿಳೆಯರು ಮಕ್ಕಳಿಗೆ ಜನ್ಮ ನೀಡಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ದೇಹವು ಅನೇಕ ಪ್ರಕ್ರಿಯೆಗಳ ಮೂಲಕ ಹೋಗುತ್ತದೆ. ಹೀಗಾಗಿ ಈಸ್ಟ್ರೋಜೆನ್​ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಜವಾಬ್ದಾರಿಯನ್ನು ಹೊಂದಿದೆ.

ಮಹಿಳೆಯರು ಹೆಚ್ಚು ಮದ್ಯಪಾನ ಮಾಡಬಾರದು

ಪುರುಷರಿಗಿಂತ ಮಹಿಳೆಯರ ದೇಹದಲ್ಲಿ ಕಡಿಮೆ ನೀರು ಇರುತ್ತದೆ, ಅದಕ್ಕಾಗಿಯೇ ಅವರು ಹೆಚ್ಚು ಮದ್ಯವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರು ಪುರುಷರಿಗಿಂತ ಕಡಿಮೆ ಮದ್ಯಪಾನ ಮಾಡಿದರೆ ಸಾಕು ಜಾಸ್ತಿ ಕಿಕ್​ ಬರುತ್ತದೆ.

ಮಹಿಳೆಯರ ದೇಹವು ಹೆಚ್ಚು ಮೃದುವಾಗಿರುತ್ತದೆ

ಮಹಿಳೆಯರ ಬೆನ್ನುಹುರಿಗಳು ಹೆರಿಗೆಗೆ ಪೂರಕವಾಗಿ ತಯಾರಾಗಿರುವುದರಿಂದ ಅವು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಎರಡನೆಯದಾಗಿ, ಮಹಿಳೆಯರ ದೇಹದಲ್ಲಿ ಹೆಚ್ಚು ಎಲಾಸ್ಟಿನ್ ಇರುತ್ತದೆ. ಈ ಪ್ರೋಟೀನ್ ದೇಹವು ಮೃದುವಾಗಿರುವ ಸಹಾಯ ಮಾಡುತ್ತದೆ.

ಮಹಿಳೆಯರು ಪುರುಷರಿಗಿಂತ 75% ಉತ್ತಮವಾಗಿ ವ್ಯಾಯಾಮ ಮಾಡಬಲ್ಲರು

ಅಧ್ಯಯನಗಳು ಇದನ್ನು ಸಾಬೀತುಪಡಿಸಿವೆ. ಮಹಿಳೆಯರ ಚಯಾಪಚಯ ಕ್ರಿಯೆ ಮತ್ತು ಹೊಂದಿಕೊಳ್ಳುವ ಸ್ನಾಯುಗಳು ಹೆಚ್ಚಿನ ವ್ಯಾಯಾಮ ಮಾಡಲು ಅವಕಾಶ ನೀಡುತ್ತವೆ. ಇದರರ್ಥ ಮಹಿಳೆಯರಿಗೆ ಹೆಚ್ಚಿನ ತ್ರಾಣವಿದೆ. ತ್ರಾಣ ಎಂದರೆ ಕೇವಲ ತೂಕವನ್ನು ಎತ್ತುವುದು ಮತ್ತು ಕಷ್ಟಪಟ್ಟು ಕೆಲಸ ಮಾಡುವುದು ಮಾತ್ರವಲ್ಲ ನೀವು ಅಮ್ಮನ ಸ್ಥಾನದಲ್ಲಿ ಒಂದು ದಿನ ಕಳೆದು ಎಲ್ಲವೂ ನಿಮಗೆ ತಿಳಿಯುತ್ತದೆ. ಯಾರಿಗೆ ಹೆಚ್ಚು ತ್ರಾಣವಿದೆ ಎಂದು.

ಇಡೀ ಮಹಿಳೆಯರ ದೇಹವೇ ಒಂದು ಅದ್ಭುತ. ಮಹಿಳೆಯರೇ... ನಾನೊಬ್ಬ ಹುಡುಗಿ ನನ್ನಿಂದ ಏನು ಮಾಡಲು ತಾನೇ ಸಾಧ್ಯ ಎಂದು ಹಿಂಜರಿಯಬೇಡಿ. ಮಹಿಳೆಯರಿಗೆ ಯಾವುದೇ ಕೆಲಸವನ್ನು ಸಹಿಸಿಕೊಳ್ಳುವ ತಾಳ್ಮೆ ಮತ್ತು ಧೈರ್ಯ ಪುರುಷರಿಗಿಂತ ಸ್ವಲ್ಪ ಹೆಚ್ಚಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net