ನಗರಸಭೆ ಜಮೀನುಗಳ ರಕ್ಷಣೆಗೆ ಸೂಚನೆ

cmc visit
ಕೋಲಾರ ನಗರಸಭೆಗೆ ಕ್ರಯ ಆಗಿರುವ ಜಮೀನುಗಳ ಸ್ಥಳಕ್ಕೆ ಅಧ್ಯೆ ಲಕ್ಷಿ$್ಮದೇವಮ್ಮ, ಪೌರಾಯುಕ್ತ ಪ್ರಸಾದ್​ ಭೇಟಿ ನೀಡಿ ಪರಿಶೀಲಿಸಿದರು.
Published on

ಕೋಲಾರ: ನಗರಸಭೆಗೆ ಕ್ರಯ ಆಗಿರುವ ಜಮೀನುಗಳ ಸ್ಥಳಕ್ಕೆ ಅಧ್ಯೆ, ಸದಸ್ಯರು ಹಾಗೂ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ವೀಸಿದರು.

ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ, ನಗರಸಭೆ ಸದಸ್ಯರಾದ ಪ್ರವಿಣ್​ ಗೌಡ, ರಾಕೇಶ್​, ಪೌರಾಯುಕ್ತ ಎಸ್​.ಪ್ರಸಾದ್​, ಕಂದಾಯ ಅಧಿಕಾರಿ ವೇಣು ಭೇಟಿ ನೀಡಿದ್ದರು.

ತಾಲೂಕಿನ ಕಸಬಾ ಹೋಬಳಿಯ ಖಾದ್ರಿಪುರ ಗ್ರಾಮದ ಸಮೀಪದ ಸರ್ವೇ ನಂಬರ್​ಗಳ ಜಮೀನುಗಳು ಈಗಾಗಲೇ ಕ್ರಯ ಆಗಿದ್ದು, ಖಾಸಗಿಯವರು ಹಾಗೂ ಕೆಲ ಭೂಗಳ್ಳರು ಒತ್ತುವರಿ ಮಾಡಿಕೊಂಡಿದ್ದು, ನಗರಸಭೆ ಆಸ್ತಿಯ ಸಂಬಂಧದ ದಾಖಲೆಗಳನ್ನು ನಗರಸಭೆ ಸದಸ್ಯ ಪ್ರವಿಣ್​ ಗೌಡ ಬಹಿರಂಗ ಪಡಿಸಿದ್ದರು. ಜತೆಗೆ ವಿಜಯವಾಣಿ ಸರಣಿ ವರದಿ ಪ್ರಕಟಿಸಿದ್ದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.

ಖಾದ್ರಿಪುರ ಸರ್ವೇ ನಂಬರ್​ 29ರ ಪೈಕಿ 1 ಎಕರೆ 19 ಗುಂಟೆ ಜಮೀನು 2002&03ರಲ್ಲಿ ನಗರಸಭೆಗೆ ಕ್ರಯ ಆಗಿತ್ತು, ಆದರೆ ನಗರಸಭೆಯ ಹೆಸರಿಗೆ ಖಾತೆ ಆಗಿರಲಿಲ್ಲ. ಆದರೆ ಕೆಲ ಖಾಸಗಿ ವ್ಯಕ್ತಿಗಳು ಜಮೀನನ್ನು ಪುನ@ ಖರೀದಿ ಮಾಡಿಕೊಂಡು ಗುಂಟೆಗಳ ಲೆಕ್ಕದಲ್ಲಿ ಪರಭಾರೆ ಮಾಡಿದ್ದಾರೆ.

ಜತೆಗೆ ತಾಲೂಕಿನ ಖಾದ್ರಿಪುರ, ಚಿಕ್ಕಹಾಸಳ, ಕೋಗಿಲಹಳ್ಳಿ, ದೊಡ್ಡ ಹಾಸಳ, ಸಂಗೋಡಹಳ್ಳಿ ಸಮೀಪವೂ ಜಮೀನುಗಳನ್ನು ನಗರಸಭೆಯ ಆಶ್ರಯ ಸಮಿತಿ ವತಿಯಿಂದ ಖರೀದಿ ಮಾಡಲಾಗಿದ್ದು, ಇದಕ್ಕೆ ತಕ್ಕ ದಾಖಲೆಗಳನ್ನು ಸಹ ಅಧಿಕಾರಿಗಳಿಗೆ ಸಲ್ಲಿಸಿ ಜಾಗಗಳನ್ನು ಭದ್ರಪಡಿಸಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಕ್ರಮವಹಿಸಬೇಕು ಎಂದು ಪ್ರವಿಣ್​ ಗೌಡ ಅಧಿಕಾರಿಗಳಿಗೆ ಮನವಿ ಮಾಡಿದ್ದರು.

ನಗರಸಭೆಯ ಜಮೀನನ್ನು ಪರಭಾರೆ ಮಾಡಬಾರದು ಎಂದು ನಗರಸಭೆಯಿಂದ ಸಬ್​ ರಿಜಿಸ್ಟ್ರಾರ್​ ಕಚೇರಿಗೆ ಪತ್ರ ಬರೆಯಲಾಗಿತ್ತು, ಆದರೆ ಇದರ ಬೆನ್ನಲೇ ನಕಲಿಪತ್ರ ಬರೆದು ಯಾವುದೇ ರೀತಿ ತರಕಾರು ಇಲ್ಲ ಎಂದು ಅರ್ಜಿ ಸಲ್ಲಿಸಲಾಗಿತ್ತು, ಇದನ್ನು ಕಚೇರಿಯ ಸಿಬ್ಬಂದಿಯೇ ಮಾಡಿದ್ದು, ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.

ಇದೇ ಸಂದರ್ಭದಲ್ಲಿ ತಾಲೂಕು ಎಡಿಎಲ್​ಆರ್​ ಹನುಮಂತಪ್ಪ ಅವರನ್ನು ಸ್ಥಳಕ್ಕೆ ಕರೆಯಿಸಿಕೊಂಡು ನಗರಸಭೆ ಅಧಿಕಾರಿಗಳು, ಸದರಿ ಜಾಗಗಳನ್ನ ಸರ್ವೇ ಮಾಡಿಸಿ ಗಡಿ ಗುರುತಿಸಿಕೊಡಲು ಕೋರಿದರು. ಇದಕ್ಕೆ ಸ್ಪಂದಿಸಿದ ಎಡಿಎಸಲ್​ಆರ್​ ಹನುಮಂತಪ್ಪ ಅವರು, ಒಂದು ದಿನ ಸಮಯ ಬೇಕಾಗಿದ್ದು, ಸಿಬ್ಬಂದಿಯ ಜತೆಗೆ ನಗರಸಭೆ ಸಿಬ್ಬಂದಿಯನ್ನು ನೀಡಿದರೆ ಆದಷ್ಟು ಬೇಗ ಕೆಲಸ ಮುಗಿಸಿಕೊಡುವುದಾಗಿ ಭರವಸೆ ನೀಡಿದರು. ಇದಕ್ಕೆ ಪೌರಾಯುಕ್ತ ಎಸ್​.ಪ್ರಸಾದ್​ ಒಪ್ಪಿಗೆ ಸೂಚಿಸಿದರು.

* ಜಮೀನು ಒತ್ತುವರಿಗೆ ಅವಕಾಶ ಕೊಡಲ್ಲ

ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ ಮಾತನಾಡಿ, ಸರ್ವೇ ನಂಬರ್​ಗಳ ಸಮೇತ ನಮ್ಮಲ್ಲಿ ದಾಖಲೆಗಳು ಲಭ್ಯವಿದ್ದು, ಜಾಗಗಳನ್ನು ಪತ್ತೆ ಮಾಡಿ ಸರ್ವೇ ಅಧಿಕಾರಿಗಳಿಂದ ಸರ್ವೇ ಮಾಡಿಸಬೇಕು, ಅತಿಕ್ರಮ ಪ್ರವೇಶ ಮಾಡದಂತೆ ನಿಷೇಧಿಸಲಾಗಿದೆ ಎಂದು ನಾಮಲಕ ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹಿಂದಿನ ಅಧಿಕಾರಿಗಳು ಕಾಳಜಿ ತೋರದ ಕಾರಣ ಇದೀಗ ಕೆಲ ಖಾಸಗಿ ವ್ಯಕ್ತಿಗಳು ಜಾಗ ವಶಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.

* ಜಮೀನು ಭದ್ರಪಡಿಸುವತನಕ ಸುಮ್ಮನಿರಲ್ಲ

ನಗರಸಭೆ ಸದಸ್ಯ ಪ್ರವಿಣ್​ ಗೌಡ ಮಾತನಾಡಿ, ನಗರ ಸಭೆಗೆ ಸೇರಿದ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಆದರೆ ಸದಸ್ಯರಾದವರು ದಾಖಲೆಗಳನ್ನು ಹುಡುಕಾಡಿ ಕೊಡುವಂತಹ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಕ್ರಯ ಆಗಿರುವ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳು ಸಹ ನಗರಸಭೆಯಲ್ಲಿ ಲಭ್ಯವಿಲ್ಲ ಎಂದು ದೂರಿದರು. ಖಾದ್ರಿಪುರ ಗ್ರಾಮದ ಸಮೀಪದಲ್ಲೇ ಸುಮಾರು 10 ಎಕರೆಗೂ ಅಧಿಕ ಜಮೀನು ಲಭ್ಯವಿದ್ದು, ಅದನ್ನು ಸರ್ವೇ ಮಾಡಿ ಭದ್ರಪಡಿಸಿಕೊಂಡು ಬಡಾವಣೆಯಾಗಿ ಅಭಿವೃದ್ಧಿಪಡಿಸಿದರೆ ಬಡವರಿಗೆ ನಿವೇಶನಗಳನ್ನು ಹಂಚಿಕೆ ಮಾಡಬಹುದು ಎಂದು ತಿಳಿಸಿದರು.

ಕೆಲ ಜಮೀನುಗಳ ವ್ಯಕ್ತಿಗಳು ಎಸಿ, ಡಿಸಿ ಹಾಗೂ ಸಿವಿಲ್​ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಸಕಾಲಕ್ಕೆ ದಾಖಲೆಗಳನ್ನು ಸಲ್ಲಿಸದ ಕಾರಣ ಖಾಸಗಿ ವ್ಯಕ್ತಿಗಳು ಸ್ವಾಧಿನಪಡಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ವ್ಯಾಜ್ಯಗಳನ್ನು ಆದಷ್ಟು ಬೇಗ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.

* ಸಿಬ್ಬಂದಿಗೆ ತರಾಟೆ

ನಗರಸಭೆಯ ಜಮೀನುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಥಳ ವೀಕ್ಷಣೆ ಸಂದರ್ಭದಲ್ಲಿ ಅಧಿಕಾರಿಗಳು, ಸದಸ್ಯರು ಕೇಳಿದಾಗ ಇಲ್ಲ ಎಂದು ಸಿಬ್ಬಂದಿ ಜೀವನ್​ ತಡಬಡಿಸಿದರು. ಇದಕ್ಕೆ ಗರಂ ಆದ ಸದಸ್ಯರು ಈ ವಿಚಾರವನ್ನು ಒಂದು ವಾರದಿಂದ ಹೇಳಲಾಗುತ್ತಿದೆ. ಆದರೂ ಸಹ ಇಲಾಖಾಧಿಕಾರಿಗಳನ್ನು ಭೇಟಿ ಮಾಡಿ ದಾಖಲೆ ಸಂಗ್ರಹಿಸುವ ಕೆಲಸ ಮಾಡಿಲ್ಲ. ಈ ವಿಚಾರದಲ್ಲಿ ನಿಮ್ಮ ವಿರುದ್ಧ ದೂರು ನೀಡಲಾವುದು ಎಂದು ಎಚ್ಚರಿಕೆ ನೀಡಿದರು.

* ಇ-ಆಸ್ತಿ ಮಾಡಿಸಿ ರಕ್ಷಣೆ

ನಗರಸಭೆಗೆ ಸಂಬಂಧಿಸಿದ ಜಮೀನುಗಳನ್ನು ಸರ್ವೇ ಮಾಡಿಸಲು ಕ್ರಮವಹಿಸಲಾಗಿದೆ. ನ್ಯಾಯಾಲಯಗಳಲ್ಲಿ ದಾವೆ ಇರುವ ಪ್ರಕರಣಗಳಿಗೆ ಪೂರಕ ದಾಖಲೆಗಳನ್ನು ಖುದ್ದು ಸಲ್ಲಿಸಿ ಆಸ್ತಿಗಳನ್ನು ನಗರಸಭೆಯ ವಶಕ್ಕೆ ಪಡೆಯಲಾಗುವುದು ಎಂದು ಪೌರಾಯುಕ್ತ ಎಸ್​.ಪ್ರಸಾದ್​ ಹೇಳಿದರು. ಆಸ್ತಿಗಳು ಎಲ್ಲೆಲ್ಲಿ ಇವೆ ಎಂಬುದನ್ನು ಪತ್ತೆ ಮಾಡಿ ಇ&ಆಸ್ತಿ ಮಾಡಿಸಲಾಗುವುದು, ಜತೆಗೆ ಎಚ್ಚರಿಕೆ ಬೋರ್ಡ್​ಗಳನ್ನು ಹಾಕಿಸಿ ಆಸ್ತಿಗಳನ್ನು ಕಾಪಾಡಲಾಗುವುದು ಎಂದು ತಿಳಿಸಿದರು.

* ವಿಜಯವಾಣಿ ವರದಿ ಪರಿಣಾಮ

ಕೋಲಾರ ನಗರಸಭೆಗೆ ಕ್ರಯ ಆಗಿರುವ ಜಮೀನುಗಳು ಖಾಸಗಿ ವ್ಯಕ್ತಿಗಳ ಸ್ವತ್ತಾಯಿತು ಶೀರ್ಷಿಕೆಯಡಿ ಹಾಗೂ ನಂತರ ಸರಣಿ ಸುದ್ದಿಗಳನ್ನು ವಿಜಯವಾಣಿಯಲ್ಲಿ ಪ್ರಕಟಿಸಲಾಗಿತ್ತು ಇದರಿಂದ ಎಚ್ಚೆತ್ತುಕೊಂಡ ಚುನಾಯಿತ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳನ್ನು ನಗರಭೆಗೆ ಸೇರಿರುವ ಜಮೀನುಗಳನ್ನು ಪತ್ತೆ ಮಾಡಿ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net