ಸುರಕ್ಷಿತ ತಾಯ್ತತನಕ್ಕೆ ಸಾಂಸ್ಥಿಕ ಹೆರಿಗೆಯೇ ಸೂಕ್ತ

ctd aroga 03
Published on

ಚಿತ್ರದುರ್ಗ: ತಾಯಿ ಮರಣ ನಿಯಂತ್ರಿಸಲು ಸಾಂಸ್ಥಿಕ ಹೆರಿಗೆ ಅಗತ್ಯವಿದೆ ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ಚಿತ್ರದುರ್ಗ ತಾಲೂಕು ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಸುರಕ್ಷಿತ ಮಾತೃತ್ವ ದಿನದ ಅಂಗವಾಗಿ ಗ ರ್ಭಿಣಿಯರ ಸುರಕ್ಷಿತ ತಾಯ್ತನದ ಬಗ್ಗೆ ಅರಿವು ಕಾರ‌್ಯಕ್ರಮದಲ್ಲಿ ಅವರು ಮಾತನಾಡಿ, ತಾಯಿ ಆರೋಗ್ಯವನ್ನು ಉತ್ತೇಜಿಸಲು ಮತ್ತು ತಾಯಿಂದರ ಮರಣ ನಿಯಂತ್ರಣಕ್ಕಾಗಿ ಸರ್ಕಾರ ಏ.11ರನ್ನು ರಾಷ್ಟ್ರೀಯ ಸುರಕ್ಷಿತ ಮಾತೃತ್ವ ದಿನವೆಂದು ಘೋಷಿಸಿದೆ. ಹೆರಿಗೆ ಮೊ ದಲು,ಹೆರಿಗೆ ಸಮಯ ಮತ್ತು ನಂತರದಲ್ಲಿ ಅಗತ್ಯವಿರುವ ಆರೈಕೆ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದರು.

ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ತಿಮ್ಮೆಗೌಡ ಮಾತನಾಡಿ,ವಿಶ್ವದಾದ್ಯಂತ ಎಲ್ಲ ದೇಶಗಳೂ ಮಾತೃ ಮರಣವನ್ನು ಗಂಭೀರವಾಗಿ ಪರಿಗಣಿಸಿವೆ. ಕಾರಣ,ಇದು ಆ ದೇಶದ ಆರೋಗ್ಯ ವ್ಯವಸ್ಥೆ ಮತ್ತು ಅಭಿವೃದ್ಧಿಯ ಸೂಚ್ಯಂಕವಾಗಿದೆ ಎಂದರು.

ಸ್ತ್ರಿ ರೋಗ ತಜ್ಞೆ ಡಾ.ಪವಿತ್ರಾ ಮಾತನಾಡಿ,ಪ್ರಸವದ ಬಳಿಕ ಮಹಿಳೆಯರ ಮನಸ್ಸು ಸೂಕ್ಷ್ಮವಾಗಿರುತ್ತದೆ. ಈ ಅಂಶವನ್ನು ಅರಿತು ಮನೆ ಯವರು ಆಕೆಯೊಂದಿಗೆ ಪ್ರೀತಿಯಿಂದ ನಡೆದು ಕೊಳ್ಳಬೇಕೆಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ,ಆಸ್ಪತ್ರೆಯಲ್ಲೇ ಪ್ರಸವಕ್ಕೆ ವ್ಯವಸ್ಥೆ ಮಾಡುವುದು ಮುಖ್ಯವೆಂದರು. 30ಕ್ಕೂ ಹೆಚ್ಚು ಗರ್ಭಿಣಿಯರ ತಪಾಸಣೆ ಮಾಡಲಾ ಯಿ ತು. ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ,ಶ್ರೀಧರ್,ಫಾರ್ಮಾಸಿ ಆಧಿಕಾರಿ ಮೋಹನ್,ಆರೋಗ್ಯ ಸುರಕ್ಷತಾಧಿಕಾರಿ ಶೋಭಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net