ಭಾರತೀಯ ಮೀಸಲು ಪಡೆ ತುಕಡಿ ಸ್ಥಾಪನೆ ಸ್ಥಳ ಬದಲು

Vidhanasoudha
Published on

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಎರಡು ಭಾರತೀಯ ಮೀಸಲು ಪಡೆ ಸ್ಥಾಪನೆ ಸಂಬಂಧ ಇದ್ದ ಗೊಂದಲಕ್ಕೆ ಪೊಲೀಸ್ ಇಲಾಖೆ ತೆರೆ ಎಳೆದಿದೆ.

ತುಮಕೂರು ಮತ್ತು ದಾವಣಗೆರೆಯಲ್ಲಿ ಈ ಮೀಸಲು ಪಡೆ ರಚಿಸಬೇಕೆಂಬ ಪ್ರಸ್ತಾವನೆ ಇತ್ತು. ಬಳಿಕ ಸ್ಥಳ ಮಾರ್ಪಡಿಸಿದ್ದು, ಈ ಸಂಬಂಧ ಒಳಾಡಳಿತ ಇಲಾಖೆಗೆ ಅಪರ ಮುಖ್ಯಕಾರ್ಯದರ್ಶಿಗೆ ಡೈರೆಕ್ಟರ್ ಜನರಲ್ ಮತ್ತು ಇನ್‌ಸ್ಪೆಕ್ಟರ್ ಜನರಲ್ ಆ್ ಪೊಲೀಸ್ ವಿವರಣೆ ನೀಡಿದ್ದಾರೆ.

ತುಮಕೂರು ಬದಲು ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದಲ್ಲಿ ಮೀಸಲು ಪಡೆ ನಿಯೋಜಿಸಲಾಗುತ್ತದೆ. ಬೆಂಗಳೂರು ಉತ್ತರದಲ್ಲಿ ಕೈಗಾರಿಕೆ ಪ್ರದೇಶ, ಐಟಿಬಿಟಿ ಉದ್ಯಮಗಳು ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ವಿವಿಐಪಿ ಭದ್ರತೆಗೆ ಅನುಕೂಲವಾಗುವ ಕಾರಣ ನಂದಿ ಬೆಟ್ಟ ಸಮೀಪದ ಆವತಿ ಗ್ರಾಮದ 218 ಎಕರೆ ಜಾಗದಲ್ಲಿ ಘಟಕ ಸ್ಥಾಪಿಸಲಾಗುತ್ತದೆ.

ಹಾಗೆಯೇ ಕೋಲಾರದಲ್ಲಿ ಇನ್ನೊಂದು ಘಟಕ ಸ್ಥಾಪಿಸುವ ಮೂಲಕ ಗಡಿ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಕರ್ತವ್ಯಕ್ಕೆ ತುಕಡಿ ನಿಯೋಜಿಸಲು ಅನುಕೂಲವಾಗುತ್ತದೆ ಎಂಬುದು ಪೊಲೀಸ್ ಇಲಾಖೆ ವಾದವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net