

ಬೆಂಗಳೂರು: ನಗರದ ಟ್ರಿನಿಟಿ ಸರ್ಕಲ್‌ನಲ್ಲಿ ಖಾಸಗಿ ಕಂಪನಿಯವರು ಅಳವಡಿಸಿರುವ ಕೃತಕ ಬುದ್ದಿಮತೆ(ಎಐ) ಆಧಾರಿತ ಡಿಸ್‌ಪ್ಲೇಬೋರ್ಡ್‌ನಲ್ಲಿ ವಾಹನಗಳ ಮೇಲೆ ಇರುವ ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ ಪ್ರದರ್ಶನವಾಗುತ್ತಿದೆ.
ಕಾರ್ಸ್‌೨೪ ಎಂಬ ಕಂಪನಿಯು ಈ ಡಿಸ್‌ಪ್ಲೇಬೋರ್ಡ್ ಅನ್ನು ಅಳವಡಿಸಿದ್ದು, ಈ ಲಕಕ್ಕೆ ಕ್ಯಾಮರಾ ಸಂಪರ್ಕ ಕಲ್ಪಿಸಲಾಗಿದ್ದು, ಆ ಕ್ಯಾಮರಾ ೧೦೦ ಮೀಟರ್ ದೂರದಲ್ಲಿರುವ ವಾಹನದ ನಂಬರ್ ಸ್ಕಾನ್ ಮಾಡಿ ಆ ವಾಹನದ ಮೇಲೆ ಎಷ್ಟು ದಂಡ ಬಾಕಿ ಇದೆ ಎಂದು ಪ್ರದರ್ಶನ ಮಾಡುತ್ತಿದ್ದು, ಈ ಬಗ್ಗೆ ನಬಿಲಾ ಜಮಾಲ್ ಎಂಬ ಮಹಿಳೆಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇದರ ಉದ್ದೇಶ ಅರಿವು ಮೂಡಿಸುವುದು:
ವಾಹನಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ದಂಡ ಎಷ್ಟಿದೆ ಎಂಬುದನ್ನು ವಾಹನ ಸವಾರರಿಗೆ ಅರಿವು ಮೂಡಿಸುವ ಸಲುವಾಗಿ ಖಾಸಗಿ ಕಂಪನಿಯವರು ಇದೇ ಮೊದಲ ಬಾರಿಗೆ ಟ್ರಿನಿಟಿ ವೃತ್ತದಲ್ಲಿ ಡಿಸ್‌ಪ್ಲೇಬೋರ್ಡ್ ಅಳವಡಿಸಲಾಗಿದೆ. ಸರ್ಕಾರಿ ಸ್ವಾಮ್ಯದ ವಾಹನ್‌ನಲ್ಲಿರುವ ಡೇಟಾ ಆಧರಿಸಿ ಅದು ವಾಹನದ ಮೇಲಿರುವ ದಂಡವನ್ನು ಪ್ರದರ್ಶಿಸುತ್ತದೆ. ಬಹಳಷ್ಟು ವಾಹನ ಸವಾರರಿಗೆ ತಮ್ಮ ವಾಹನದ ಮೇಲೆ ಎಷ್ಟು ದಂಡ ಇದೆ ಎಂಬುದೇ ಗೊತ್ತಿಲ್ಲ. ಈ ರೀತಿ ದಂಡದ ಬಗ್ಗೆ ಮಾಹಿತಿ ಅರಿಯುವ ವಾಹನ ಸವಾರರು ಮುಂದೆ ಸಂಚಾರ ನಿಯಮವನ್ನು ಉಲ್ಲಂಸುವಾಗ ಎಚ್ಚರಿಕೆ ವಹಿಸುತ್ತಾರೆ ಎಂಬುದು ಆ ಡಿಸ್‌ಪ್ಲೇಬೋರ್ಡ್ ಅಳವಡಿಸಿರುವ ಉದ್ದೇಶವಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಕಾರ್ತಿಕ್ ರೆಡ್ಡಿ ವಿಜಯವಾಣಿಗೆ ತಿಳಿಸಿದ್ದಾರೆ.