ಇನ್‌ಸ್ಪೆಕ್ಟರ್ ವರ್ಗಾವಣೆ

IPS
Published on

ಬೆಂಗಳೂರು: ಅಪರಾಧ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಲು ಸೈಟ್ ಬರೆಸಿಕೊಳ್ಳುತ್ತಿದ್ದ ಆರೋಪದ ಮೇಲೆ ಲೋಕಾಯುಕ್ತ ದಾಳಿ ಆರೋಪಕ್ಕೆ ಒಳಗಾಗಿದ್ದ ಅನ್ನಪೂಣೇಶ್ವರಿನಗರ ಠಾಣೆ ಇನ್‌ಸ್ಪೆಕ್ಟರ್‌ರನ್ನು ಕೊನೆಗೂ ವರ್ಗಾವಣೆ ಮಾಡಲಾಗಿದೆ.

ಅನ್ನಪೂಣೇಶ್ವರಿನಗರ ಠಾಣೆ ಇನ್‌ಸ್ಪೆಕ್ಟರ್ ಎ.ವಿ. ಕುಮಾರ್ ಅವರನ್ನು ಬೆಂಗಳೂರು ನಗರ ವಿವಿಐಪಿ ಭದ್ರತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇವರ ಜಾಗಕ್ಕೆ ರಾಮನಗರದ ಚನ್ನಪಟ್ಟಣ ಪಿಟಿಎಸ್‌ನಲ್ಲಿದ್ದ ಇನ್‌ಸ್ಪೆಕ್ಟರ್ ಡಿ.ಕೆ. ಲತೇಶ್ ಕುಮಾರ್ ವರ್ಗಾವಣೆ ಮಾಡಿ ಗೃಹ ಇಲಾಖೆ ಆದೇಶಿಸಿದೆ.

ಗಂಭೀರ ಆರೋಪ ಕೇಳಿಬಂದ ಮೇಲೆ ಎ.ವಿ. ಕುಮಾರ್‌ರನ್ನು ಒಒಡಿ ಮೇರೆಗೆ ವಿವಿಐಪಿ ವಿಭಾಗಕ್ಕೆ ಕಳುಹಿಸಲಾಗಿತ್ತು. ಇದೀಗ ಕಡ್ಡಾಯ ವರ್ಗಾವಣೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net