

ಬಂಗಾರಪೇಟೆ: ಬೆಂಗಳೂರು-ಚೆನ್ಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಣಿ ಅಪಘಾತಗಳು ಸಂಭವಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಂಸದ ಎಂ.ಮಲ್ಲೇಶ್ ಬಾಬು, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅರ್ಚನಾ ಹಾಗೂ ಇತರೆ ಅಧಿಕಾರಿಗಳು ಕಾರಿಡಾರ್ ಪರಿಶೀಲಿಸಿದರು.
ಆಂಬುಲೆನ್ಸ್, ಪೆಟ್ರೋಲಿಂಗ್ ವಾಹನಗಳು, ಸಿಸಿ ಕ್ಯಾಮರಾಗಳು ಇಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ವಿಜಯವಾಣಿಯಲ್ಲು ಬೆಂಗಳೂರು- ಚೆನ್ಬೈ ಕಾರಿಡಾರ್ನಲ್ಲಿ ಸಾವುಗಳ ಸರಣಿ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಲಾಗಿತ್ತು. ಈ ಬಗ್ಗೆ ಸಾರ್ವಜನಿಕರ ವಲಯದಲ್ಲೂ ಚರ್ಚೆಯಾಗಿತ್ತು. ಆ ಹಿನ್ನೆಲೆಯಲ್ಲಿ ರಸ್ತೆ ಪರಿಶೀಲನೆ ನಡೆಸಿರುವ ಸಂಸದ ಎಂ.ಮಲ್ಲೇಶ್ ಬಾಬು ಅವರು ನೂನ್ಯತೆಗಳನ್ನು ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸಂಸದ ಮಲ್ಲೇಶ್ ಬಾಬು ಮಾತನಾಡಿ, ಜಿಲ್ಲೆಯಲ್ಲಿ ಹಾದು ಹೋಗಿರುವ ಕಾರಿಡಾರ್ನಲ್ಲಿ ಪ್ರತಿ 17 ಕಿಮೀಗೆ ಆಂಬುಲೆನ್ಸ್, ಪೆಟ್ರೋಲಿಂಗ್ ವಾಹನ ಇರೊದಾಗಿ ಹೆದ್ದಾರಿ ಯೋಜನಾ ನಿರ್ದೇಶಕಿ ತಿಳಿಸಿದ್ದಾರೆ. ಹೆದ್ದಾರಿಯಲ್ಲಿ ಸಂಚರಿಸುವವರು ವೇಗ ಮಿತಿಯಲ್ಲಿ ಇರಬೇಕು, ಈ ರಸ್ತೆ ನೋಡಿದ ತಕ್ಷದ ವೇಗವಾಗಿ ಎಂತಹವರಿಗೂನು ಸಂಚರಿಸಬೇಕು ಅನಿಸುತ್ತದೆ. ಅದಕ್ಕೂ ಮುಂಚೆ ತಮ್ಮನ್ನು ನಂಬಿಕೊಂಡು ಇರೊರ ಬಗ್ಗೆ ಗಮನ ಇರಲಿ, ದ್ವಿಚಕ್ರ, ಟ್ಯಾಕ್ಟರ್ ವಾಹನಗಳವರು ರಸ್ತೆಯಲ್ಲಿ ಓಡಾಡಬೇಡಿ, ಪೊಲೀಸು, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸೂಚನೆಗಳನ್ನು ಸಾರ್ವಜನಿಕರು ಪಾಲನೆ ಮಾಡಬೇಕೆಂದು ಸಲಹೆ ನೀಡಿದರು.