

ಶಿವಮೊಗ್ಗ: ನಬಾರ್ಡ್ನಿಂದ ಡಿಸಿಸಿ ಬ್ಯಾಂಕ್ಗೆ ನೀಡಲಾಗುವ ಪುನರ್ಧನ ಸೌಲಭ್ಯದ ಮಿತಿ ಕಡಿತಗೊಳಿಸಿರುವುದನ್ನು ಖಂಡಿಸಿ ಡಿಸಿಸಿ ಬ್ಯಾಂಕ್ ಅಧ್ಯ ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಗಳ ಒಕ್ಕೂಟದಿಂದ ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಡಿಸಿಸಿ ಬ್ಯಾಂಕ್ನಿಂದ ಶೂನ್ಯ ಬಡ್ಡಿದರ ಯೋಜನೆಯಡಿ ರೈತರಿಗೆ ಸಾಲ ನೀಡಲಾಗುತ್ತಿದ್ದು, ರೈತರಿಗೆ ಬೆಳೆ ಸಾಲ ನೀಡುವ ಮಿತಿಯನ್ನು 5 ಲಕ್ಷ ರೂ.ವರೆಗೆ ಹಾಗೂ ಶೇ. 3ರ ಮಧ್ಯಮಾವ-ಧಿ ಸಾಲದ ಮಿತಿಯನ್ನು 15 ಲಕ್ಷ ರೂ.ವರೆಗೆ ರಾಜ್ಯ ಸರ್ಕಾರ ಹೆಚ್ಚಿಸಿದೆ. ಆದರೆ ರೈತರು ಶೂನ್ಯ ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲಕ್ಕೆ ಡಿಸಿಸಿ ಬ್ಯಾಂಕ್ನ್ನೇ ಅವಲಂಭಿಸಿರುತ್ತಾರೆ.
ಇದುವರೆಗೂ ನಬಾರ್ಡ್ ನಿಂದ ಡಿಸಿಸಿ ಬ್ಯಾಂಕ್ಗೆ ಕಡಿಮೆ ಬಡ್ಡಿದರದಲ್ಲಿ ಪುನರ್ಧನ ಸೌಲಭ್ಯ ನೀಡಲಾಗುತ್ತಿತ್ತು. ಇದರಿಂದ ಸಾಲ ನೀಡಲು ಡಿಸಿಸಿ ಬ್ಯಾಂಕ್ಗೆ ಸಂಪನ್ಮೂಲದ ಕೊರತೆಯಿರಲಿಲ್ಲ. ಕೆಲವು ವರ್ಷಗಳಿಂದ ನಬಾರ್ಡ್ನಿಂದ ಬ್ಯಾಂಕ್ಗಳಿಗೆ ನೀಡುವ ಪುನರ್ಧನ ಸೌಲಭ್ಯವನ್ನು ಗಣನೀಯವಾಗಿ ಕಡಿತಗೊಳಿಸಲಾಗಿದೆ ಎಂದು ಪ್ರತಿಭಟನಾಕಾರರು ಆೇಪ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಸದಸ್ಯರ ಸಾಲದ ಬೇಡಿಕೆ 2,650 ಕೋಟಿ ರೂ. ಪ್ರಸ್ತುತ 1,200 ಕೋಟಿ ರೂ. ಸಾಲ ಮಾತ್ರ ನೀಡಲು ಸಾಧ್ಯವಾಗಿದೆ. ಬೇಡಿಕೆಯ ಅರ್ಧದಷ್ಟನ್ನೂ ಪೂರೈಸಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಸಹಕಾರ ಸಂಗಳು ಆರ್ಥಿಕವಾಗಿ ಸದೃಢವಾಗಿಲ್ಲ. ಸ್ವಂತ ಬಂಡವಾಳದಿಂದ ಸಾಲ ನೀಡುವ ಶಕ್ತಿ ಹೊಂದಿಲ್ಲ. ಅನಿವಾರ್ಯವಾಗಿ ಅಪೆಕ್ಸ್ ಬ್ಯಾಂಕ್ನಿಂದ ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆದು ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ನಷ್ಟ ಅನುಭವಿಸುವಂತಾಗಿದೆ ಎಂದು ತಿಳಿಸಿದರು.
ರೈತರ ಹಿತದೃಷ್ಟಿಯಿಂದ ಜಿಲ್ಲಾ ಬ್ಯಾಂಕ್ಗಳಿಗೆ ನೀಡಲಾಗುತ್ತಿರುವ ನಬಾರ್ಡ್ ಪುನರ್ಧನ ಸೌಲಭ್ಯ ಹೆಚ್ಚಿಸುವಂತೆ ಮುಖ್ಯಮಂತ್ರಿಗಳು ನಬಾರ್ಡ್ಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿರ್ದೇಶಕರಾದ ಹನುಮಂತು, ಕೆ.ಪಿ.ದುಗ್ಗಪ್ಪಗೌಡ, ಜಿ.ಎನ್.ಸುಧೀರ್, ಶಿಮುಲ್ ವಿದ್ಯಾಧರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.