ವಿನೂತನವಾಗಿ ಮತದಾನ ಜಾಗೃತಿ

election
ಶಿವಮೊಗ್ಗದಲ್ಲಿ ನಗರ ಪಾಲಿಕೆ ಸ್ವೀಪ್ ಸಮಿತಿಯಿಂದ ಏರ್ಪಡಿಸಿದ್ದ ಕಾರ್ಮಿಕ ದಿನಾಚರಣೆ ಹಾಗೂ ಮತದಾನ ಜಾಗೃತಿಯನ್ನು ಅನುಪಮಾ ಉದ್ಘಾಟಿಸಿದರು. ಸುಪ್ರಿಯಾ, ಉದಯ ಕಡಂಬ ಮುಂತಾದವರಿದ್ದರು.
Published on

ಶಿವಮೊಗ್ಗ: ಮತದಾನ ಜಾಗೃತಿಗಾಗಿ ವಿನೂತನ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಇದೀಗ ಕಾರ್ಮಿಕ ದಿನಾಚರಣೆಗೂ ಮತದಾನ ಜಾಗೃತಿಯ ಸ್ವರೂಪ ನೀಡಲಾಗಿದ್ದು, ಗುರುವಾರ ಶಿವಮೊಗ್ಗದಲ್ಲಿ ನಗರ ಪಾಲಿಕೆ ಸ್ವೀಪ್ ಸಮಿತಿಯಿಂದ ಕಾರ್ಮಿಕ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ನಗರ ಪಾಲಿಕೆ ಸ್ವೀಪ್ ನೋಡಲ್ ಅಧಿಕಾರಿಗಳಾದ ಅನುಪಮಾ, ಸುಪ್ರಿಯಾ ಹಾಗೂ ತಂಡದವರು, ಕಾರ್ಮಿಕ ದಿನಾಚರಣೆಯ ಮಹತ್ವವನ್ನು ವಿವರಿಸುವ ಜತೆಗೆ ಮತದಾನದ ಅಗತ್ಯವನ್ನು ವಿವರಿಸಿದರು. ಕಾರ್ಮಿಕರಿಗೆ ಮ್ಯೂಸಿಕಲಲ್ ಚೇರ್ ಮತ್ತಿತರ ಸರಳ ಆಟಗಳನ್ನು ಆಡಿಸಲಾಯಿತು.
ಚುನಾವಣಾ ಆಯೋಗದ ಸಹಾಯವಾಣಿ, ಆ್ಯಪ್ ಬಳಕೆ ಬಗ್ಗೆ ಮಾಹಿತಿ ನೀಡಲಾಯಿತು. ಸಿ-ವಿಜಿಲ್ ಆ್ಯಪ್ ಮೂಲಕ ದೂರು ನೀಡುವುದು ಹೇಗೆಂಬ ಬಗ್ಗೆ ವಿವರಣೆ ನೀಡಲಾಯಿತು. ಪ್ರಮುಖರಾದ ಉದಯ ಕಡಂಬ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net