ವರದಿಯಲ್ಲಿ ಗೌಂಡರ್ ಸಮುದಾಯಕ್ಕೆ ಅನ್ಯಾಯ

chakravarthy
ಚಕ್ರವರ್ತಿ
Published on

ಶಿವಮೊಗ್ಗ: ಜಾತಿ ಜನಗಣತಿ ವರದಿಯಲ್ಲಿ ಗೌಂಡರ್ ಸಮುದಾಯದ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಈ ವರದಿಯನ್ನು ಜಾರಿಗೊಳಿಸುವ ಮೊದಲು ಮತ್ತೊಮ್ಮೆ ಗಣತಿ ಮಾಡಬೇಕೆಂದು ಕರುನಾಡು ರಾಜ್ಯ ವನ್ನಿಯರ್ ಮಹಾಸಭಾ ರಾಜ್ಯ ಸಂಘಟನಾ ಕಾರ್ಯದರ್ಶಿ ಚಕ್ರವರ್ತಿ ಒತ್ತಾಯಿಸಿದರು.

ವನ್ನಿ, ವನ್ನಿಗೌಂಡರ್, ಗೌಂಡರ್, ವನ್ನಿರೆಡ್ಡಿ, ನಾಯರ್, ಪಡಿಯಾಚಿ, ಪಲ್ಲಿ ಎಂದು ಕರೆಯುವ ಎಲ್ಲ ಜಾತಿಯವರು ರಾಜ್ಯದಲ್ಲಿ ವನ್ನಿಯರ್ ಸಮುದಾಯದವರೇ ಆಗಿದ್ದಾರೆ. ಕಾಂತರಾಜ ವರದಿಯಲ್ಲಿ 1.03 ಲಕ್ಷ ಗೌಂಡರ್, 33,500 ವನ್ನಿಯರ್ ಕುಲಕ್ಷತ್ರಿಯ ಎಂದು ನಮೂದಿಸಲಾಗಿದೆ. ನಮ್ಮ ಸಮುದಾಯದವರು ರಾಜ್ಯದಲ್ಲಿ ಸುಮಾರು 30 ಲಕ್ಷ ಇದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೌಂಡರ್ ಎಂಬ ಹೆಸರಿರುವ ಜಾತಿಯವರಿಗೆ 2-ಎ ಮೀಸಲಾತಿ ನೀಡುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. ಆದ್ದರಿಂದ ವನ್ನಿಯರ್ ಸಮುದಾಯಕ್ಕೆ ಸೇರಿದ ಎಲ್ಲರಿಗೂ 2-ಎ ಜಾತಿ ಪ್ರಮಾಣ ಪತ್ರ ನೀಡಬೇಕು. ಮರು ಗಣತಿ ಮಾಡಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.

ವನ್ನಿ ಗೌಂಡರ್ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಜಿ.ಗಣೇಶಪ್ಪ, ರಾಜ್ಯಾಧ್ಯಕ್ಷ ರೊಟ್ಟಿ ಸುಬ್ಬಣ್ಣ, ಉಪಾಧ್ಯಕ್ಷ ಪಿ.ಷಣ್ಮುಗಂ, ಕಾರ್ಯದರ್ಶಿ ವಿ.ಮುರುಗೇಶ್, ಸಹಕಾರ್ಯದರ್ಶಿ ರಾಮಕೃಷ್ಣ, ಜೆ.ಮುರುಗನ್, ಎ.ಮಂಜು, ಗಿರೀಶ್, ಸಂಪತ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net