

ಮುಂಬೈ: ಮುಂಬೈನಿಂದ ದೆಹಲಿಗೆ ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮತ್ತೆ ಮುಂಬೈಗೆ ಮರಳಿದೆ. ಹೀಗೆ ಲೋಹದ ಹಕ್ಕಿ ವಾಪಸಾಗಲು ಕಾರಣ ಒಂದು ಪಕ್ಷಿ. ಇಂಥದ್ದೊಂದು ಅಪರೂಪದ ಪ್ರಸಂಗ ಭಾನುವಾರ ಬೆಳಗ್ಗೆ ನಡೆದಿದೆ.
ಇಂಡಿಗೋ ಸಂಸ್ಥೆಯ ಏರ್ಬಸ್ ಎ-320 (ಫ್ಲೈಟ್ ನಂ. 6ಇ 5047) ಭಾನುವಾರ ಬೆಳಗ್ಗೆ 8.05ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿತ್ತು. ಹೀಗೆ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಪಕ್ಷಿಯೊಂದು ವಿಮಾನಕ್ಕೆ ಬಡಿದಿದೆ. ಆಗ ಅದನ್ನು ಪೈಲಟ್ ಮುಂಬೈ ನಿಲ್ದಾಣಕ್ಕೆ ಮರಳಿ ತಲುಪಿಸಿದ್ದಾರೆ.
ಮೊದಲು ಹೊರಟಿದ್ದ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಬಹಿರಂಗಗೊಂಡಿಲ್ಲ. ಆದರೆ ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. (ಏಜೆನ್ಸೀಸ್)