ಸೋಂಕು ಹರಡೋಣ ಎಂದವ ಜೈಲು ಸೇರಿದ್ದಷ್ಟೇ ಅಲ್ಲ, ಕೆಲಸವನ್ನೂ ಕಳೆದುಕೊಂಡ...

corona spred 28 mar 20
Published on

ಬೆಂಗಳೂರು: ಸಾರ್ವಜನಿಕವಾಗಿ ಸೀನುವ ಮೂಲಕ ಸೋಂಕನ್ನು ಹರಡೋಣ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡವ ಶುಕ್ರವಾರ ರಾತ್ರಿ ಬಂಧನಕ್ಕೆ ಒಳಗಾಗಿದ್ದಲ್ಲದೇ, ಪ್ರತಿಷ್ಠಿತ ಕಂಪನಿಯಲ್ಲಿ ಸಿಕ್ಕಿದ್ದ ಕೆಲಸವನ್ನೂ ಕಳೆದುಕೊಂಡಿದ್ದಾನೆ. ದೇಶ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸಮಾಜದ್ರೋಹಿ ಚಿಂತನೆಯಲ್ಲಿ ತೊಡಗಿರುವವರಿಗೆ ಇದೊಂದು ಪಾಠ.

ಕರೊನಾ ಹರಡೋಣಾ ಎಂದಾತ ತನ್ನ ಉದ್ಯೋಗಿ ಅಲ್ಲ ಎಂದು ನಿರಾಕರಿಸಿದ್ದ ಆ ಕಂಪನಿ, ಬಹುಶಃ ಮಿಸ್ಟೇಕನ್ ಐಡೆಂಟಿಟಿ ಎಂದು ಹೇಳಿತ್ತು. ಆದರೆ, ಆಂತರಿಕ ತನಿಖೆಯ ಬಳಿಕ ಆತ ತಮ್ಮಲ್ಲೇ ಕೆಲಸ ಮಾಡುತ್ತಿದ್ದುದನ್ನು ಕಂಪನಿ ಖಚಿತ ಪಡಿಸಿದೆ. ಅಷ್ಟೇ ಅಲ್ಲ, ಆಂತರಿಕ ತನಿಖೆಯ ಬಳಿಕ ಉದ್ಯೋಗಿಯನ್ನು ಹೊರ ಹಾಕಿರುವ ಬಗ್ಗೆ ಪ್ರಕಟಣೆಯನ್ನೂ ಹೊರಡಿಸಿದೆ.

ಈ ವಿಷಯವನ್ನು ಆ ಕಂಪನಿ ತನ್ನ ಟ್ವಿಟರ್ ಹ್ಯಾಂಡಲ್​ನಲ್ಲಿ ಪ್ರಕಟಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗಿಯೊಬ್ಬರು ತಮ್ಮ ನೀತಿಗೆ ವಿರುದ್ಧವಾಗಿ ಪೋಸ್ಟ್ ಮಾಡಿದ್ದಾರೆ. ಇಂಥ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು. ಅವರನ್ನು ಕೂಡಲೇ ಕೆಲಸದಿಂದ ವಜಾಗೊಳಿಸಲಾಗಿದೆ ಎಂಬ ಸಂದೇಶವನ್ನು ಪ್ರಕಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net