ಇನ್​ಫೊಸಿಸ್​ ಸಿಇಒ ಆಗಿ ಸಲಿಲ್ ಪರೇಖ್ ಮರುನೇಮಕ

Infosys
Published on

ಬೆಂಗಳೂರು: ಇನ್​ಫಾರ್ಮೇಷನ್​ ಟೆಕ್ನಾಲಜಿ ಸೇವೆಗಳಿಗೆ ಸಂಬಂಧಿಸಿದಂತೆ ದೈತ್ಯ ಕಂಪನಿಗಳಲ್ಲಿ ಒಂದಾಗಿರುವ ಇನ್​ಫೊಸಿಸ್​ಗೆ ಹೊಸ ಸಿಇಒ ನೇಮಕವಾಗಿದೆ.

ನಿನ್ನೆ ನಡೆದ ಕಂಪನಿಯ ಆಡಳಿತ ಮಂಡಳಿಯ ನಿರ್ದೇಶಕರ ಸಭೆಯಲ್ಲಿ ಈ ಸಿಇಒ ನೇಮಕ ನಿರ್ಧಾರವಾಗಿದೆ. ಕಂಪನಿಯ ನಾಮಿನೇಷನ್​ ಆ್ಯಂಡ್ ರೆಮುನರೇಷನ್ ಕಮಿಟಿ (ಎನ್​ಆರ್​ಸಿ) ಶಿಫಾರಸಿನ ಮೇರೆಗೆ ಈ ನೇಮಕ ನಡೆದಿದೆ.

ಅದರನ್ವಯ ಇನ್​ಫೊಸಿಸ್ ಕಂಪನಿಯ ಸಿಇಒ ಮತ್ತು ಎಮ್​ಡಿ ಆಗಿ ಸಲಿಲ್ ಪರೇಖ್ ಮತ್ತೊಂದು ಅವಧಿಗೆ ಮರುನೇಮಕಗೊಂಡಿದ್ದಾರೆ. ಇವರು ಐದು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ.

ಅಂದಹಾಗೆ 2018ರಿಂದ ಸಲಿಲ್ ಪರೇಖ್ ಇನ್​ಫೊಸಿಸ್​ ಸಿಇಒ ಮತ್ತು ಎಂಡಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಾಗ್ಯೂ ಅವರ ನೇಮಕಕ್ಕೆ ಷೇರುದಾರರ ಅನುಮೋದನೆ ಇನ್ನಷ್ಟೇ ಆಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net