ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ನಿರಂತರ

1-RNR-08
Published on

ಹಾವೇರಿ: ಕರ್ನಾಟಕ ಮಾಹಿತಿ ಹಕ್ಕು ವೇದಿಕೆ ಭ್ರಷ್ಟಾಚಾರ ಕಿತ್ತು ಹಾಕುವ ಕೆಲಸದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು ಭ್ರಷ್ಟಾಚಾರ ಎಸಗಿರುವ ವ್ಯಕ್ತಿ ಎಷ್ಟೇ ಪ್ರಭಾವಿ ಆಗಿದ್ದರೂ ಅಂತವರ ವಿರುದ್ಧ ಹೋರಾಟ ಮಾಡಲು ನಮ್ಮ ವೇದಿಕೆ ಸದಾ ಸಿದ್ದವಾಗಿದೆ ಎಂದು ಕರ್ನಾಟಕ ಮಾಹಿತಿ ಹಕ್ಕು ವೇದಿಕೆ ರಾಜ್ಯಾಧ್ಯ ಹೇಮಂತ ನಾಗರಾಜ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಒಂದು ದಶಕದಿಂದ ಕರ್ನಾಟಕ ಮಾಹಿತಿ ಹಕ್ಕು ವೇದಿಕೆ ಸಾಮಾಜಿಕ ಪಿಡುಗುಗಳಲ್ಲಿ ಒಂದಾದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸರಣಿ ಹೋರಾಟ ಮಾಡಿಕೊಂಡು ಬಂದಿದೆ. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾ ಟಕಗಳನ್ನು ಸ್ಥಾಪಿಸಿ ಜಿಲ್ಲಾಧ್ಯ ಕಾರ್ಯದಶಿರ್ಗಳನ್ನು ನೇಮಕ ಮಾಡಿದ್ದು ಹಾವೇರಿ ಜಿಲ್ಲಾಧ್ಯರಾಗಿ ಬಸವರಾಜ, ಕಾರ್ಯದಶಿರ್ಯಾಗಿ ಪ್ರವಿಣ ಭಜಂತ್ರಿ ಇವರನ್ನು ನೇಮಕ ಮಾಡಲಾಗಿದೆ ಎಂದರು.
ರಾಜ್ಯ ಮುಖಂಡ ಆಲ್ಬರ್ಟ ಅಂಥೋನಿ, ಶಿವನಾರಾಯಣ, ಶ್ರೀನಿವಾಸ, ವೈ.ಎನ್​. ಪಾಟೀಲ, ಪರಶುರಾಮ, ಗುರುರಾಜ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net