

ಹುಣಸೂರು: ಹುಣಸೂರು ನಗರಸಭೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗಾಗಿ 13.50 ಕೋಟಿ ರೂ.ಗಳ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಶೀಘ್ರ ಆರಂಭಗೊಳ್ಳಲಿದ್ದು, ನಗರಸಭೆ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ದುಸ್ಥಿತಿಯಲ್ಲಿರುವ ರಸ್ತೆಗಳ ಕುರಿತು ಅದಿಕಾರಿಗಳಿಗೆ ಮಾಹಿತಿ ಸಲ್ಲಿಸಬೇಕೆಂದು ಶಾಸಕ ಜಿ.ಡಿ.ಹರೀಶ್‌ಗೌಡ ಸೂಚಿಸಿದರು.
ಶನಿವಾರ ನಗರಸಭೆಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಮಾಲಿಕ್ ಪಾಷಾ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರ ಶಾಸಕರಿಗೆ ಅನುದಾನ ನೀಡುತ್ತೇವೆ ಎಂದು ಹೇಳುತ್ತಲೇ ಕಾಲ ಕಳೆಯುತ್ತಿದೆಯೇ ಹೊರತು ನಯಾಪೈಸೆಯನ್ನು ನೀಡುತ್ತಿಲ್ಲ. ಇಂತಹ ಪರಿಸ್ಥಿತಿಯ ನಡುವೆಯೂ ಶಾಸಕರ ವೈಯಕ್ತಿಕ ನಿ ಮತ್ತು ನಗರಸಭೆಯ ನಿಯನ್ನೇ ಬಳಸಿಕೊಳ್ಳುವಂತಾಗಿದೆ. ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ನಗರದ ಅರಸು ಪುತ್ಥಳಿ ವೃತ್ತದಿಂದ ಆರಂಭಗೊಂಡು ಹಾಳಗೆರೆವರೆಗೆ, ಧ್ರುವ ಪೆಟ್ರೋಲ್ ಬಂಕ್‌ನಿಂದ ಕಾಫಿ ವರ್ಕ್ಸ್ ರಸ್ತೆ, ಸಂವಿಧಾನ ವೃತ್ತದಿಂದ ಎಚ್.ಡಿ.ಕೋಟೆ ವೃತ್ತ, ಕಲ್ಪತರು ವೃತ್ತದಿಂದ ಶಬ್ಬೀರ್ ನಗರದ ಮುಖ್ಯರಸ್ತೆಯ ವ್ಯಾಪ್ತಿಯಲ್ಲಿ 12 ಕೋಟಿ ರೂ.ಗಳ ವೆಚ್ಚದಡಿ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಗರಸಭೆ ನಿಯಿಂದ ನಗರಸಭೆ ವ್ಯಾಪ್ತಿಯ ವಾರ್ಡ್‌ಗಳ ರಸ್ತೆಯನ್ನು 1.5 ಕೋಟಿ ರೂ.ಗಳ ಅನುದಾನದೊಂದಿಗೆ ಅಭಿವೃದ್ಧಿ ಪಡಿಸಲಾಗುವುದು ಎಂದರು.
ುಟ್‌ಪಾತ್ ತೆರವು: ನಗರದಾದ್ಯಂತ ಎಲ್ಲೆಡೆ ುಟ್‌ಪಾತ್‌ಗಳನ್ನು ಬೀದಿಬದಿ ವ್ಯಾಪಾರಿಗಳು ಅತಿಕ್ರಮಿಸಿಕೊಂಡಿರುವ ಕುರಿತು ಸಾಕಷ್ಟು ದೂರುಗಳು ಬರುತ್ತಿದ್ದು, ಶೀಘ್ರದಲ್ಲಿ ನಗರಸಭೆ ವತಿಯಂದ ಪೊಲೀಸ್ ಸಹಯೋಗದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ. ಕೆ.ಆರ್.ನಗರ ರಸ್ತೆಯಲ್ಲಿರುವ ಶನೈಶ್ಚರಸ್ವಾಮಿ ದೇಗುಲದ ಮುಂಭಾಗ ಮಳೆ ನೀರು ನಿಂತು ರಸ್ತೆ ಹಾಳಾಗುತ್ತಿದ್ದು, ಸಿಮೆಂಟ್ ರಸ್ತೆ ನಿರ್ಮಾಣದೊಂದಿಗೆ ನೀರು ಸರಾಗವಾಗಿ ಹರಿದುಹೋಗಲು ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ನಗರದ ಘನತ್ಯಾಜ್ಯ ಘಟಕದ ಅಭಿವೃದ್ಧಿಗಾಗಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷೆ ಆಶಾ ಕೃಷ್ಣನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್, ಸದಸ್ಯರಾದ ಕೃಷ್ಣರಾಜ ಗುಪ್ತ, ಎಸ್.ಶರವಣ, ದೊಡ್ಡಹೆಜ್ಜೂರು ರಮೇಶ್, ಸ್ವಾಮಿಗೌಡ, ಮಂಜು, ವಿವೇಕಾನಂದ, ದೇವರಾಜ್, ಗೀತಾ ನಿಂಗರಾಜು, ಪೌರಾಯುಕ್ತೆ ಕೆ.ಮಾನಸಾ ಸೇರಿದಂತೆ ಅಕಾರಿಗಳು ಹಾಜರಿದ್ದರು.