

ಕೆ.ಆರ್.ಸಾಗರ: ಒಳಹರಿವಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ಕೆ.ಆರ್.ಸಾಗರ ಅಣೆಕಟ್ಟೆ ನೀರಿನ ಮಟ್ಟ 122.25 ಅಡಿ ತಲುಪಿದ್ದು, ಭರ್ತಿಯಾಗಲು 2.55 ಅಡಿ ಬಾಕಿ ಇದೆ.
ಶುಕ್ರವಾರ ಬೆಳಗ್ಗೆ ಒಳಹರಿವು 52,829 ಕ್ಯೂಸೆಕ್ ಇತ್ತು. ಸಂಜೆ ವೇಳೆಗೆ 69,332 ಕ್ಯೂಸೆಕ್‌ನಷ್ಟಾಗಿದೆ. ಹೊರಹರಿವಿನ ಪ್ರಮಾಣ ಕಡಿಮೆ ಮಾಡಲಾಗಿದ್ದು, 20 ಗೇಟುಗಳ ಮೂಲಕ 35,610 ಕ್ಯೂಸೆಕ್ ಬಿಡಲಾಗುತ್ತಿದೆ. 45.965 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 28 ಟಿಎಂಸಿ ನೀರು ಅಧಿಕ ಸಂಗ್ರಹವಾಗಿದೆ.
ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 88.40 ಅಡಿ, ಒಳಹರಿವು 3,856 ಸಾವಿರ ಕ್ಯೂಸೆಕ್, ಹೊರಹರಿವು 472 ಕ್ಯೂಸೆಕ್, 15.007 ಟಿಎಂಸಿ ನೀರಿನ ಸಂಗ್ರಹವಿತ್ತು.