VIDEO: 'ಮೋದಿಯನ್ನು ಕೊಲ್ಲುತ್ತೇನೆ' ಎಂದ ಬಾಲಕ: ಮಕ್ಕಳಲ್ಲಿಯೂ ಬಿತ್ತಲು ಶುರುವಾಯಿತೇ ವಿಷಬೀಜ? ಬಿಜೆಪಿ ಟ್ವೀಟ್​

modiweb
Published on

ಇಂದೋರ್​ (ಮಧ್ಯಪ್ರದೇಶ): ಈ ಬಾಲಕನಿಗೆ ಇನ್ನೂ ಆರು ವರ್ಷ. ಈತನ ಕುಟುಂಬ ಕರೊನಾ ವೈರಸ್​ಗೆ ತುತ್ತಾಗಿತ್ತು. ಅವರು ಆಸ್ಪತ್ರೆಯಲ್ಲಿ ಕೆಲ ದಿನಗಳವರೆಗೆ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದಾರೆ.

ಈ ಕುಟುಂಬ ಆಸ್ಪತ್ರೆಯಿಂದ ಬಿಡುಗಡೆಯಾಗಿ ಖುಷಿಯಿಂದ ಹೊರಬರುತ್ತಿದ್ದಂತೆಯೇ ಎಲ್ಲರತ್ತ ಕೈಬೀಸಿದ್ದಾರೆ. ಇದೇ ವೇಳೆ ಅದೇ ಕುಟುಂಬದವನೇ ಆದ ಆರು ವರ್ಷದ ಬಾಲಕ ಮೋದಿ ಕೋ ಮಾರೆಂಗೆ (ಪ್ರಧಾನಿ ಮೋದಿಯನ್ನು ಕೊಲ್ಲುತ್ತೇನೆ) ಎಂದು ಹೇಳಿದ್ದಾನೆ.

ಇದು ನಡೆದಿರುವುದು ಮಧ್ಯಪ್ರದೇಶದ ಇಂದೋರ್‌ನ ಇಂಡೆಕ್ಸ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ. ಆಸ್ಪತ್ರೆಯಿಂದ ಮನೆಗೆ ಗುಣಮುಖರಾಗಿ ವಾಪಸ್​ ಮನೆಗೆ ಹೊರಟಿದ್ದ ಕುಟುಂಬ ಅಲ್ಲಿರುವ ಕ್ಯಾಮೆರಾಗಳತ್ತ ಕೈಬೀಸುತ್ತಿರುವಾಗ ಬಾಲಕ ಈ ರೀತಿ ಹೇಳಿದ್ದಾನೆ.

ಈ ವೀಡಿಯೋ ಇದೀಗ ವೈರಲ್​ ಆಗಿದೆ. ಈ ವಿವಾದಿತ ವೀಡಿಯೋವನ್ನು ಬಿಜೆಪಿಯ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪುಟ್ಟ ಮಗುವಿನ ಮುಗ್ಧ ಮನಸ್ಸಿನಲ್ಲಿ ವಿಷ ತುಂಬಿದವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ.

ಈ ವಿಡಿಯೋ ಟ್ವಿಟ್ಟರ್‌ನಲ್ಲಿ ತುಂಬಾ ವೈರಲ್ ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಆರೋಗ್ಯ ಸಿಬ್ಬಂದಿ ಜಾತಿ ಧರ್ಮದ ಭೇದ ಎನ್ನದೇ ಎಲ್ಲರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸೆ ನೀಡುವ ಸಂಬಂಧ ಭಾರತ ಸರ್ಕಾರವೂ ದುಡಿಯುತ್ತಿದೆ. ಇಂಥವರ ಸೇವೆಯಿಂದಲೇ ಅದೆಷ್ಟೋ ಕುಟುಂಬದವರು ಮಾರಣಾಂತಿಕ ಸೋಂಕಿನಿಂದ ಗುಣಮುಖರಾಗಿ ಬರುತ್ತಿದ್ದಾರೆ.

ಆದರೆ ಏನೂ ಅರಿಯದ ಈ ಮುಗ್ಧ ಬಾಲಕನ ತಲೆಯೊಳಗೆ ಇಂಥ ವಿಷ ಅಂಶ ಹೊಕ್ಕಿದೆ ಎಂದರೆ ಅದಕ್ಕೆ ಕಾರಣ ಯಾರು? ತಾನೇನು ಹೇಳುತ್ತಿದ್ದೇನೆ ಎಂದು ಬಾಲಕನಿಗೆ ಅರಿವಿಲ್ಲ. ಆದರೆ ಈ ರೀತಿಯ ಹೇಳಿಕೆಗಳನ್ನು ಅವನ ತಲೆಯಲ್ಲಿ ತುಂಬುವವರು ಇದ್ದಾರೆ ಎಂದರೆ ಅದು ದೇಶಕ್ಕೆ ದೊಡ್ಡ ಮಾರಕ. ಬಾಲಕ ಈಗಲೇ ಹೀಗಿದ್ದರೆ ಮುಂದೆ ಭವಿಷ್ಯದಲ್ಲಿ ಈತ ಇನ್ನೇನು ಮಾಡಬಹುದು? ಎಂಬಿತ್ಯಾದಿಯಾಗಿ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

1.8 ಸಾವಿರ ಜನರು ಕಾಮೆಂಟ್ ಮಾಡಿದ್ದಾರೆ. ಆರೂವರೆ ಸಾವಿರ ಜನ ವಿಡಿಯೋವನ್ನು ರಿಟ್ವೀಟ್ ಮಾಡಿದ್ದಾರೆ. 14 ಸಾವಿರ ಜನ ಅಮಿತ್​ ಮಾಳವೀಯ ಅವರ ಹೇಳಿಕೆಯನ್ನು ಲೈಕ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net