

Indore Couple: ಮೇ.23ರಂದು ಕಾಣೆಯಾದ ಹನಿಮೂನ್ ಸಲುವಾಗಿ ಮೇಘಾಲಯದ ಚಿರಾಪುಂಜಿಗೆ ಪ್ರಯಾಣಿಸಿದ್ದ ಇಂದೋರ್ನ ದಂಪತಿ ಪ್ರಕರಣ ಇದೀಗ ಅಚ್ಚರಿ ತಿರುವು ಪಡೆದಿದೆ. ಯಾವ ನಾಪತ್ತೆ ಪ್ರಕರಣದಲ್ಲಿ ಸೋನಮ್ಗಾಗಿ ಶೋಧ ನಡೆಸಲಾಗುತ್ತಿತ್ತೋ, ಆ ಕೇಸ್ನಲ್ಲಿ ಶಾಕಿಂಗ್ ಟ್ವಿಸ್ಟ್ ಎದುರಾಗಿದೆ.
ಪೊಲೀಸರಿಗೆ ದೊಡ್ಡ ತಲೆನೋವಾಗಿ ಕಾಡುತ್ತಿದ್ದ ಮಿಸ್ಸಿಂಗ್ ಕೇಸ್ನಲ್ಲಿ ಪ್ರಮುಖ ಆರೋಪಿ ಪತ್ನಿ ಸೋನಮ್ ಎಂಬುದು ಸದ್ಯ ಪೊಲೀಸರ ತನಿಖೆಯಲ್ಲಿ ಬಟಾಬಯಲಾಗಿದೆ. ಹನಿಮೂನ್ ನೆಪದಲ್ಲಿ ಚಿರಾಪುಂಜಿಗೆ ಟ್ರೆಕ್ಕಿಂಗ್ ಮಾಡಲು ಹೋಗಿದ್ದ ನವಜೋಡಿ ಪೈಕಿ ಪತಿಯ ಮೃತದೇಹ ಸಿಕ್ಕಿದ್ದು, ಅದೊಂದು ಕೊಲೆ ಎಂಬುದು ಮೊದಲ ದಿನವೇ ಪೊಲೀಸರಿಗೆ ಸ್ಪಷ್ಟವಾಗಿತ್ತು. ಅಂತೆಯೇ ಚುರುಕು ತನಿಖೆ ಕೈಗೊಂಡ ಪೊಲೀಸರಿಗೆ ಕೊಲೆಗೈದ ಪಾಪಿಗಳು ಸೆರೆಗೆ ಸಿಕ್ಕಿಬಿದ್ದಿದ್ದಾರೆ.
ಸೋನಮ್ ಪತಿ ರಾಜು ರಘುವಂಶಿ ಬರ್ಬರವಾಗಿ ಹತ್ಯೆಯಾದ ದಿನದಿಂದ ಆರೋಪಿಗಳಿಂದ ತಲೆಮರಿಸಿಕೊಂಡಿದ್ದಳು. ರಾಜ್ ಕುಶ್ವಾ ಜೊತೆಗೆ ಸಂಬಂಧ ಹೊಂದಿದ್ದ ಕಿರಾತಕಿ ಸೋನಮ್, ತಮ್ಮಿಬ್ಬರ ಮಧ್ಯೆ ಗಂಡ ಅಡ್ಡಿಯಾಗಿದ್ದಾನೆ ಎಂದು ಆತನನ್ನು ಹತ್ಯೆಗೈಯಲು ಸಂಚು ಹೂಡಿದ್ದಳು. ಅದಕ್ಕೆ ತಕ್ಕಂತೆ ಮೇಘಾಲಯದ ಚಿರಾಪುಂಜಿಗೆ ಟ್ರೆಕ್ಕಿಂಗ್ ನೆಪದಲ್ಲಿ ಗಂಡನನ್ನು ಇಲ್ಲಿಗೆ ಕರೆತಂದ ಆಕೆ ಪ್ರಿಯಕರನ ಸ್ನೇಹಿತರೊಂದಿಗೆ ರಘುವಂಶಿಯನ್ನು ಕೊಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ.